ಮಡಿಕೇರಿ, ಏ. 24: ಪ್ರತಿಯೋರ್ವರು ಮನಸ್ಸಿನ ಒಳಗೂ ಹೊರಗೂ ಸಂತೋಷದಿಂದಿರಬೇಕೆಂದು ಶಿಬಿರಾರ್ಥಿಗಳಿಗೆ ಯಶೀರ್ ಕರೆ ನೀಡಿದರು.
ದೇಶದ ಗಡಿ ಜಮ್ಮು ಕಾಶ್ಮೀರದ ಶ್ರೀನಗರದಿಂದ ಮಡಿಕೇರಿಯಲ್ಲಿ ಏರ್ಪಡಿಸಿದ್ದ ಆಧ್ಯಾತ್ಮಿಕ ಶಿಬಿರಕ್ಕೆ ಆಗಮಿಸಿದ್ದ ಅವರು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಜ್ಞಾಪಕಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರಕ್ಕೆ ಮುಂಜಾನೆ ಭೇಟಿ ನೀಡಿ ಪ್ರಾಣಾಯಾಮದಲ್ಲಿ ಪಾಲ್ಗೊಂಡರು. ಬಳಿಕ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಎಲ್ಲದರಲ್ಲೂ ಶ್ರದ್ಧೆ ಇರಬೇಕು. ಶಿಬಿರದಲ್ಲಿ ಕಲಿಸಿಕೊಡುವಂತಹ ವಿಚಾರಗಳನ್ನು ಮನೆಯಲ್ಲಿಯೂ ಅಭ್ಯಸಿಸಿಕೊಂಡು ಹೋಗುವಂತೆ ಕರೆ ನೀಡಿದರು. ವಾಂಡರರ್ಸ್ ಕ್ಲಬ್ನ ಬಾಬು ಸೋಮಯ್ಯ, ಶ್ಯಾಂ ಪೂಣಚ್ಚ, ಗಣೇಶ್, ಬಿ.ಬಿ. ಆನಂದ, ದೈಹಿಕ ಶಿಕ್ಷಕರಾದ ವೆಂಕಟೇಶ್, ಲಕ್ಷ್ಮಣ್ಸಿಂಗ್, ಇತರರಿದ್ದರು.