ಮಡಿಕೇರಿ, ಏ. 24: ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಯುನಿಸೆಫ್ ಸಹಯೋಗದಲ್ಲಿ ಈಗಾಗಲೇ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಲಾಗಿದ್ದು, ತಾ. 25 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಸೋಮವಾರಪೇಟೆ ಸ್ತ್ರೀಶಕ್ತಿ ಭವನದಲ್ಲಿ ವಿಪತ್ತು ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಹಾಗೂ ಅಣಕು ಪ್ರದರ್ಶನ ನಡೆಯಲಿದೆ ಎಂದು ಯುನಿಸೆಫ್ ಸಂಸ್ಥೆಯ ಸಮಾಲೋಚಕ ಪ್ರಭಾತ್ ಹಾಗೂ ಮನೋಹರ್ ತಿಳಿಸಿದ್ದಾರೆ.