ಕಾಕೋಟುಪರಂಬು (ವೀರಾಜಪೇಟೆ), ಏ. 21: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೇಕೇರಿರ, ಮಂಡೇಟಿರ, ಪುಚ್ಚಿಮಂಡ, ಕುಪ್ಪಂಡ, ಕಂಜಿತಂಡ, ದಾಸಂಡ, ಪಟ್ಟಡ, ಚಂದುರ, ಕರವಂಡ, ಚೋಯಮಾಡಂಡ, ಕೋಟೇರ, ತೀತಿಮಾಡ, ಕೊಕ್ಕಂಡ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಚೋಯಮಾಡಂಡ ಬಿಪಿನ್ ಹ್ಯಾಟ್ರಿಕ್ ಗೋಲು ಬಾರಿಸುವದರ ಮೂಲಕ ತಂಡಕ್ಕೆ ಮುನ್ನಡೆ ತಂದು ಕೊಟ್ಟರು.

ಮೇಕೆರಿರ ತಂಡ 2-0 ಗೋಲುಗಳಿಂದ ಮಾಪಂಗಡ ತಂಡವನ್ನು ಮಣಿಸಿತು. ಮೇಕೇರಿರ ಪರ ನರ್ತನ್(2ನಿ), ಅಭಿನವ್(5ನಿ)ದಲ್ಲಿ ಗೋಲು ದಾಖಲಿಸಿದರು. ಅಂತರಾಷ್ಟ್ರೀಯ ಆಟಗಾರ ಮೇಕೇರಿರ ನಿತಿನ್ ತಿಮ್ಮಯ್ಯ ತಮ್ಮ ಕುಟುಂಬದ ಪರ ಆಡಿ ಗಮನ ಸೆಳೆದರು.

ಮಂಡೇಟಿರ ತಂಡ ಮಂಡೇಡ ತಂಡವನ್ನು 4-0 ಗೋಲುಗಳಿಂದ ಪರಾಭವ ಗೊಳಿಸಿತು. ಮಂಡೇಟ್ಟಿರ ಪರ ವರುಣ್(6ನಿ), ವಿನ್ಯಾಸ್(21ನಿ), ನಿಹಾಲ್(25ನಿ), ನಿಶಾಲ್(38ನಿ)ದಲ್ಲಿ ಗೋಲು ಬಾರಿಸಿದರು. ಬೇತ್ರಿ ಮುಕ್ಕಾಟ್ಟಿರ ತಂಡ 5-1 ಗೊಲುಗಳಿಂದ ಮಾಣಿರ ತಂಡವನ್ನು ಪರಾಭವ ಗೋಲಿಸಿತು. ಮುಕ್ಕಾಟ್ಟಿರ ಪರ ಪೊನ್ನಣ್ಣ (7ನಿ), ಪೆಮ್ಮ್ಮಯ್ಯ(11ನಿ), ಕಾವೇರಪ್ಪ(15ನಿ), ಮೋಹನ್(18ನಿ), ಸುಬ್ರಮಣಿ (19ನಿ), ಮಾಣಿರ ಪರ ಚೇತನ್(35ನಿ)ದಲ್ಲಿ ಗೋಲು ದಾಖಲಿಸಿದರು. ಪುಚ್ಚಿಮಂಡ ತಂಡ 8-2 ಗೋಲುಗಳಿಂದ ಬೇರೆರ ತಂಡವನ್ನು ಮಣಿಸಿತು. ಪುಚ್ಚಿಮಂಡ ಪರ ಯಶ್ವಿನ್4(6,15,21,30 ನಿ), ಮಿತ್ರ(17,34ನಿ), ಭವನ್(32ನಿ), ಮಾಚಯ್ಯ(36ನಿ), ಬೇರೆರ ಪರ ಸೂರÀಜ್(3ನಿ),ದೀರಜ್(30ನಿ)ದಲ್ಲಿ ಗೋಲು ಬಾರಿಸಿದರು.

ಕುಪ್ಪಂಡ ತಂಡ 7-0 ಗೋಲುಗಳಿಂದ ಬುಟ್ಟಿಯಂಡ ತಂಡವನ್ನು ಸೋಲಿಸಿತು. ಕುಪ್ಪಂಡ ಪರ ಗಣಪತಿ(2ನಿ), ಭವನ್2(3,19ನಿ), ಬಿದ್ದಪ್ಪ2(4,24ನಿ), ಕಾರ್ಯಪ್ಪ2(8,9ನಿ)ದಲ್ಲಿ ಗೋಲು ದಾಖಲಿಸಿದರು. ಬುಟ್ಟಿಯಂಡ ತಂಡದಲ್ಲಿ 8 ಆಟಗಾರರು ಭಾಗವಹಿಸಿ ಕ್ರೀಡಾಸ್ಪ್ಪೂರ್ತಿಯನ್ನು ಮೆರೆದರು. ಮಾಜಿ ಅಂತರಾಷ್ಟ್ರೀಯ ಆಟಗಾರ ಹಾಗೂ ಹಾಕಿ ಕೊಡಗು ಸಂಸ್ಥೆಯ ಕಾರ್ಯದರ್ಶಿ ಚಂಗಪ್ಪ ಹಾಗೂ ರಾಷ್ಟ್ರೀಯ ಆಟಗಾರ್ತಿ ಕಾವೇರಮ್ಮ ಪ್ರೇಕ್ಷಕರ ಗಮನ ಸೆಳೆದರು. ಕಂಜಿತಂಡ 3-0 ಗೋಲುಗಳಿಂದ ಮಲ್ಲಂಗಡ ತಂಡವನ್ನು ಪರಾಭವಗೊಳಿಸಿತು. ಕಂಜಿತಂಡ ಪರ ಪೂವಣ್ಣ(2ನಿ), ಕುಶಾಲಪ್ಪ(18ನಿ), ಧರ್ಮಜ(27ನಿ)ದಲ್ಲಿ ಗೋಲು ಗಳಿಸಿದರು.

ದಾಸಂಡ ತಂಡ 4-2 ಗೋಲುಗಳಿಂದ ನಂಬುಡುಮಂಡ ತಂಡವನ್ನು ಮಣಿಸಿತು. ದಾಸಂಡ ಪರ ಚಂಗಪ್ಪ2(4,16,ನಿ),ದೇವಯ್ಯ(19,39ನಿ), ನಂಬುಡುಮಂಡ ಪರ ಶರತ್(2ನಿ),ಲಿತಿನ್(33ನಿ.ದಲ್ಲಿ ಗೋಲು ಹೊಡೆದರು.

ಪಟ್ಟಡ ತಂಡ 6-1ಗೋಲುಗಳಿಂದ ಮೊಳ್ಳೆರ ತಂಡವನ್ನು ಪರಾಭವ ಗೊಳಿಸಿತು. ಪಟ್ಟಡ ಪರ ಅಚ್ಚಪ್ಪ2 (10,24ನಿ), ಸತೀಶ್(28ನಿ), ಬೆಳ್ಳಿಯಪ್ಪ(22ನಿ), ಕಾವೇರಪ್ಪ (27ನಿ) ಸೋಮಯ್ಯ(39ನಿ), ಮೊಳ್ಳೆರ ಪರ ಹರ್ಷ(5ನಿ)ದಲ್ಲಿ ಗೋಲು ಬಾರಿಸಿದರು.

ಮೈದಾನ 2ರಲ್ಲಿ ನಡೆದ ಪಂದ್ಯಾಟದಲ್ಲಿ ಚಂದುರ ತಂಡ 5-0 ಗೊಲುಗಳಿಂದ ಪಟ್ಟಚೆರೆವಂಡ ತಂಡವನ್ನು ಪರಾಭವ ಗೊಳಿಸಿತು ಚಂದುರ ಪರ ಪೂವಣ್ಣ 2(5,26ನಿ), ಪ್ರಸನ್ನ(9,17ನಿ), ಶ್ಯಾಂ2(9,21ನಿ)ದಲ್ಲಿ ಗೋಲು ದಾಖಲಿಸಿದರು. ಕರವಂಡ ತಂಡ 1-0 ಗೋಲಿನಿಂದ ಪಾಲೆಯಡ ತಂಡವನ್ನು ಮಣಿಸಿತು. ಕರವಂಡ ಪರ ಪೊನ್ನಪ್ಪ(29ನಿ)ದಲ್ಲಿ ಗೋಲು ಬಾರಿಸಿದರು. ಚೋಯಮಾಡಂಡ ತಂಡ ಮಚ್ಚಂಡ ತಂಡವನ್ನು 3-0ಗೋಲುಗಳಿಂದ ಪರಾಭವಗೊಳಿಸಿತು. ಚೋಯಮಾಡಂಡ ಬಿಪಿನ್(23,30,39ನಿ)ದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ಕೋಟೆರ ತಂಡ ಉದಿಯಂಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಕೋಟೆರ ಪರ ದ್ಯಾನ್(16ನಿ), ದಿಲೀಪ್(26ನಿ), ಉದಿಯಂಡ ಪರ ಜಗದೀಶ್(29ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.ತೀತಿಮಾಡ 3-0ಗೋಲುಗಳಿಂದ ಬಾರಿಯಂಡ ತಂಡವನ್ನು ಸೋಲಿಸಿತು. ತೀತಿಮಾಡ ಪರ ಪ್ರಜ್ವಲ್(14ನಿ), ಬಿದ್ದಪ್ಪ(16ನಿ), ಬೋಪಯ್ಯ (20ನಿ) ದಲ್ಲಿ ಗೋಲು ದಾಖಲಿಸಿದರು. ಕೊಕ್ಕಂಡ ತಂಡವು 2-1 ಗೋಲುಗಳಿಂದ ಮೊಣ್ಣಂಡ ತಂಡವನ್ನು ಮಣಿಸಿತು. ಕೊಕ್ಕಂಡ ಪರ ಅರ್ಜುನ (8ನಿ), ಪೊನ್ನಣ್ಣ (12ನಿ), ಮೊಣ್ಣಂಡ ಪರ ಮಾಚಯ್ಯ(34ನಿ)ದಲ್ಲಿ ಗೋಲು ಬಾರಿಸಿದರು. -ಪಿಯುಸಿ