ಭಾಗಮಂಡಲ, ಏ. 21: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಪಂದ್ಯಾಟದ ಇಂದಿನ ಪಂದ್ಯದಲ್ಲಿ ಪಾಂಡಿಮನೆ, ಕಲ್ಲುಮುಟ್ಲು, ಬಿದ್ರುಪಣೆ ಹಾಗೂ ದಂಬೆಕೋಡಿ ತಂಡಗಳು ಗೆಲವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಕೋರನ ಮತ್ತು ದಬ್ಬಡ್ಕ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕೋರನ ತಂಡ 63 ರನ್ ಗಳಿಸಿದರೆ, ದಬ್ಬಡ್ಕ ತಂಡವು 46 ರನ್ ಗಳಿಸಿತು. ದಂಬೆಕೋಡಿ ಮತ್ತು ಮಾವಜಿ ತಂಡಗಳ ನಡುವಿನ ಪಂದ್ಯದಲ್ಲಿ ದಂಬೆಕೋಡಿ ತಂಡವು 121 ರನ್ ಗಳಿಸಿದರೆ ಮಾವಜಿ ತಂಡವು ಕೇವಲ 43 ರನ್ ಗಳಿಸಿತು. ಕಲ್ಲುಮುಟ್ಲು ಮತ್ತು ಇಳಂತಿಲ (ಬಂದಡ್ಕ) ತಂಡಗಳ ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ 106 ರನ್ ಗಳಿಸಿದರೆ ಇಳಂತಿಲ ತಂಡವು 83 ರನ್ ಗಳಿಸಿತು.

ಬಳ್ಳಡ್ಕ (ಸುಳ್ಯ) ತಂಡದ ವಿರುದ್ಧ ಪಾಂಡಿಮನೆ ತಂಡವು 110 ರನ್ ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಸುಳ್ಯಕೋಡಿ ಮತ್ತು ಕಲ್ಲುಮುಟ್ಲು ತಂಡಗಳ ನಡುವಿನ ಪಂದ್ಯದಲ್ಲಿ ಸುಳ್ಯಕೋಡಿ ತಂಡವು 66 ರನ್ ಗಳಿಸಿದರೆ, ಕಲ್ಲುಮುಟ್ಲು ತಂಡವು 72 ರನ್ ಗಳಿಸಿ ಗೆಲವು ಸಾಧಿಸಿತು.

ನಡುಬೀಟಿ ಮತ್ತು ಬಿದ್ರುಪಣೆ ತಂಡಗಳ ನಡುವಿನ ಪಂದ್ಯದಲ್ಲಿ ಬಿದ್ರುಪಣೆ ತಂಡವು 4 ವಿಕೆಟ್ ಗೆಲವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರೆ ದಂಬೆಕೋಡಿ ತಂಡವು ಕೋರನ ತಂಡದ ವಿರುದ್ಧ ಗೆಲವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.