ಸೋಮವಾರಪೇಟೆ, ಏ. 21: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಅಕ್ಕಮಹಾದೇವಿ ಜಯಂತಿ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಬಳಗದ ಸದಸ್ಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಅಕ್ಕಮಹಾದೇವಿ ಮಂಟಪದಲ್ಲಿ ನಡೆದ ಸ್ಪರ್ಧೆಗಳನ್ನು ಹಿರಿಯ ಸದಸ್ಯರಾದ ಲಲಿತಮ್ಮ ಉದ್ಘಾಟಿಸಿದರು. ಬಳಗದ ಅಧ್ಯಕ್ಷೆ ಜಲಜಾ ಶೇಖರ್, ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಪದಾಧಿಕಾರಿಗಳಾದ ಜಲಜಾ ವಿಜಯ್ ಕುಮಾರ್, ಸುಮಾ ಸುದೀಪ್, ಉಷಾ ತೇಜಸ್ವಿ, ಕವಿತ ಸಂಜಯ್, ಮಂಗಳ ಆನಂದ್, ಭಾಗ್ಯ ಷಡಾಕ್ಷರಿ ಕಾರ್ಯಕ್ರಮ ನಿರ್ವಹಿಸಿದರು.