ನಾಪೆÇೀಕ್ಲು, ಏ. 20: ತಾ. 23 ರಿಂದ 28 ರವರೆಗೆ ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಕ್ಕಬೆ ದಿ. ಹೈಲ್ಯಾಂಡರ್ಸ್ ಕ್ಲಬ್ ವತಿಯಿಂದ ‘ಹೈಲ್ಯಾಂಡರ್ಸ್ ಇನ್ವಿಟೇಷನ್‍ನ ಕಪ್’ ಹಾಕಿ ಪಂದ್ಯಾವಳಿ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಕ್ಲಬ್‍ನ ಅಧ್ಯಕ್ಷ ಅಪ್ಪಾರಂಡ ಸಾಗರ್, ಪ್ರಕೃತಿ ವಿಕೋಪದಲ್ಲಿ ನೊಂದವರಿಗಾಗಿ ಚಾರಿಟಿ ಹಾಕಿ ಟೂರ್ನಮೆಂಟನ್ನು ಆಯೋಜಿಸಲಾಗಿದ್ದು, ಇದರಲ್ಲಿ 14 ತಂಡಗಳು ಭಾಗವಹಿಸಲಿದೆ. 23ರಂದು ಪಂದ್ಯಾಟ ಆರಂಭಗೊಳ್ಳಲಿದ್ದು, ತಾ. 28 ರಂದು ಪಂದ್ಯಾಟದ ಫೈನಲ್ ಪಂದ್ಯ ನಡೆಯಲಿದೆ ಎಂದು ತಿಳಿಸಿದರು.

ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 50 ಸಾವಿರ ಮತ್ತು ದ್ವಿತೀಯ ರೂ. 25 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಭಾಗವಹಿಸುವ ಎಲ್ಲಾ ತಂಡಗಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತದೆ. ತಂಡದಲ್ಲಿ ಭಾಗವಹಿಸುವ 20 ವರ್ಷದ ಒಳಗಿನ ಉತ್ತಮ ಆಟಗಾರರಿಗೆ ಕಾಲ್ಸ್, ಸಾಯಿಶಂಕರ್ ವಿದ್ಯಾಸಂಸ್ಥೆಗಳಲ್ಲಿ ಉಚಿತ ವಿದ್ಯಾಭ್ಯಾಸ ನೀಡಲಾಗುವದು ಎಂದರು. ಚೆಪ್ಪುಡಿರ, ಮಂಡೇಪಂಡ, ಕಲಿಯಂಡ, ಅರೆಯಡ, ಅಂಜಪರವಂಡ, ಕಾಂಡಂಡ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಈ ಸಂದರ್ಭ ಕಲಿಯಂಡ ನವೀನ್ ಅಯ್ಯಣ್ಣ, ಸಂಪ ಅಯ್ಯಪ್ಪ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಡಕಡ ಸುರೇಶ್ ಬೆಳ್ಯಪ್ಪ, ದೀನಾ ಪೂವಯ್ಯ, ಕುಲ್ಲೇಟಿರ ಅರುಣ್ ಬೇಬ, ಅರೆಯಡ ಚಿಣ್ಣಪ್ಪ, ಅಂಜಪರವಂಡ ದೀಪು, ನಾಟೋಳಂಡ ಶಂಭು, ಬಡಕಡ ಉತ್ತಯ್ಯ ಇದ್ದರು.