ಸುಂಟಿಕೊಪ್ಪ, ಏ. 20: ವೃಕ್ಷೋದ್ಭವ ಗಣಪತಿ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷರಾಗಿ ಬಿ.ಎಸ್. ಸದಾಶಿವ ರೈ ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಮಧುರಮ್ಮ ಬಡಾವಣೆಯ ವೃಕ್ಷೋದ್ಭವ ಗಣಪತಿ ದೇವಸ್ಥಾನದಲ್ಲಿ ತಾ. 19 ರಂದು ಸಂಜೆ ದೇವಸ್ಥಾನ ಉತ್ಸವ ಸಮಿತಿಯ ವಾರ್ಷಿಕ ಮಹಾಸಭೆಯನ್ನು ದೇವಸ್ಥಾನದಲ್ಲಿ ನಡೆಸಲಾಯಿತು.
ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು ಉಪಾಧ್ಯಕ್ಷರುಗಳಾಗಿ ಮಂಜುನಾಥ್, ಕೆ.ಪಿ. ವಿನೋದ್, ದಿವಾಕರ ಪೂಜಾರಿ, ಅಯ್ಯಪ್ಪನ್, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಮನ್ (ಶಿವಮಣಿ), ಸಹ ಕಾರ್ಯದರ್ಶಿಯಾಗಿ ವಿ. ಶಿವಕುಮಾರ್, ಖಜಾಂಚಿಯಾಗಿ ಬಿ.ಎಸ್. ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ 11 ಮಂದಿಯನ್ನು ಆಯ್ಕೆಗೊಳಿಸಲಾಯಿತು.