ಚೆಟ್ಟಳ್ಳಿ, ಏ. 20: ರಕ್ತದಾನ ಜೀವದಾನವಾಗಿದೆ. ಒಬ್ಬ ವ್ಯಕ್ತಿಯ ಜೀವನವನ್ನು ಉಳಿಸಿದರೆ ಮನುಕುಲದ ಜೀವನವನ್ನು ಉಳಿಸಿದಂತೆ ಎಂದು ಕೊಡಗು ಜಿಲ್ಲಾ ಎಸ್.ಎಸ್.ಎಫ್. ಉಪಾಧ್ಯಕ್ಷರಾದ ಶಾಫಿ ಸಹದಿ ಸೋಮವಾರಪೇಟೆ ಹೇಳಿದರು.
ಇಂಡಿಯನ್ ರೆಡ್ ಕ್ರಾಸ್ ಲೇಡಿಗ್ರೋಷನ್ ಸೊಸೈಟಿ ಆಸ್ಪತ್ರೆ ಮಂಗಳೂರು, ಮತ್ತು ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕೊಡಗು ಕುಶಾಲನಗರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಎಸ್.ಎಸ್.ಎಫ್. ಅಧ್ಯಕ್ಷ ಅಜೀಜ್ ಸಖಾಫಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಡ್ವರ್ಡ್ ವಾಸು ಮಾತನಾಡಿ, ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದಾಗುವ ಲಾಭಗಳನ್ನು ವಿವರಿಸಿದರು. ಉದ್ಘಾಟನೆಯನ್ನು ಅಬ್ದುಲ್ ಕರೀಂ ನೆರವೇರಿಸಿದರು.
ವೀರಾಜಪೇಟೆ: ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಲೇಡಿಗ್ರೋಷನ್ ಆಸ್ಪತ್ರೆ ಆಶ್ರಯದಲ್ಲಿ ವೀರಾಜಪೇಟೆ ಅನ್ವಾರುಲ್ ಹುದಾ ದಹ್ವಾ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಎಸ್.ಎಸ್.ಎಫ್. ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಅಹ್ಸನಿ ವಹಿಸಿದ್ದರು. ವೈದ್ಯ ಡಾ. ರವಿ, ರಾಜ್ಯ ಎಸ್.ಎಸ್.ಎಫ್. ಅಧ್ಯಕ್ಷ ಯಾಕೂಬ್ ಮಾಸ್ಟರ್, ಮುಬಶ್ಶರ್ ಅಹ್ಸನಿ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಇದ್ದರು.