ಮಡಿಕೇರಿ, ಏ. 20: ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿತ ವಿಶ್ವ ಕಲಾ ದಿನದ ಅಂಗವಾಗಿನ ಚಿತ್ರಕಲಾ ದಿನಾಚರಣೆ ಸಂದರ್ಭದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರ ವಿವರ ಇಂತಿದೆ.

5 ರಿಂದ 7 ನೇ ತರಗತಿ: ಮೊದಲ ಬಹುಮಾನ - ಲಕ್ಷ್ಯ ಪಿ.ಎನ್. (ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯ). ದ್ವಿತೀಯ - ಡೆಲ್ಫೀನ್ ಜ್ಯೂಡ್ ಕೆ.ಜೆ. (ಸಂತ ಮೈಕಲರ ಶಾಲೆ ಮಡಿಕೇರಿ), ತೃತೀಯ - ಬಿ. ಮನಸ್ವ (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ), ಸಮಾಧಾನಕರ- ಎಂ.ಎ. ರಿಷಿಕಾ (ಜವಹಾರ್ ನವೋದಯ ವಿದ್ಯಾಲಯ) ಮತ್ತು ಆರ್. ಪ್ರಣವ್ ಆರ್. ಆಚಾರ್ಯ (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ).

8 ರಿಂದ 10 ನೇ ತರಗತಿ ವಿಭಾಗ: ಪ್ರಥಮ- ದುರ್ಗಾಪ್ರಸಾದ್ (ಸರ್ಕಾರಿ ಹೈಸ್ಕೂಲ್ ಸುಂಟಿಕೊಪ್ಪ) , ದ್ವಿತೀಯ - ಪಿ.ಎನ್. ಮೋಕ್ಷ್ (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ). ತೃತೀಯ ಕೆ.ಕೆ. ಹವ್ಯಾಸ್ (ಜವಹಾರ್ ನವೋದಯ ವಿದ್ಯಾಲಯ), ಸಮಾಧಾನಕರ - ಎನ್.ಜೆ. ಸಂಜನಾ (ಸಂತ ಜೊಸೇಫರ ಕಾನ್ವೆಂಟ್ ಮಡಿಕೇರಿ) ಮತ್ತು ಡಬ್ಲು.ಎನ್. ನಿಹಾರಿಕ.

ಸಾರ್ವಜನಿಕ ವಿಭಾಗ: ಪ್ರಥಮ - ಆರ್.ಬಿ. ಪ್ರವೀಣ್ ಮಡಿಕೇರಿ, ದ್ವಿತೀಯ- ಗೋಪಾಲ್ ಸೋಮಯ್ಯ ಮರಗೋಡು, ತೃತೀಯ - ಟಿ.ಎಸ್. ಲೀಲಾವತಿ ಮಡಿಕೇರಿ, ಸಮಾಧಾನಕರ ಬಹುಮಾನ - ಎಸ್.ಎಸ್. ಕೌಶಿಕ್ (ಕೆ.ಬಿ. ಕಾಲೇಜು, ಕುಶಾಲನಗರ) ಶಯನ್ ಚಿಟ್ಟಿಯಪ್ಪ (ಸಂತ ಅನ್ನಮ್ಮ ಕಾಲೇಜು). ಒಟ್ಟು 148 ಸ್ಪರ್ಧಿಗಳು ಪಾಲ್ಗೊಂಡಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಜಾನಪದ ಪರಿಷತ್ ಜಿಲ್ಲಾ ನಿರ್ದೇಶಕಿ ಸುಳ್ಳಿಮಾಡ ಗೌರಿ ನಂಜಪ್ಪ, ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ. ಅರುಣ್, ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಟಿ.ಜಿ. ಪ್ರೇಮ್ ಕುಮಾರ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಕಾರ್ಯಕ್ರಮ ಸಂಚಾಲಕಿ ಕೆ. ಜಯಲಕ್ಷ್ಮೀ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಲಾವಿದ ಬಿ.ಆರ್. ಸತೀಶ್, ಭರತ್ ಮತದಾನದ ಮಹತ್ವ ಕುರಿತ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು ಎಂದು ಸ್ಪರ್ಧೆ ಆಯೋಜಿಸಿದ್ದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.