ಮಡಿಕೇರಿ, ಏ. 19: ಕೊಡಗಿನ ಅಲ್ಲಲ್ಲಿ ಗ್ರಾಮ ದೇವರುಗಳ ವಾರ್ಷಿಕ ಉತ್ಸವದೊಂದಿಗೆ ಪೂಜಾಧಿ ಜರುಗುವಂತಾಗಿದೆ.

ಕೂಡಿಗೆ: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿವಿಧ ಪೂಜಾ ಕೈಂಕರ್ಯ ಹಾಗೂ ಮೆರವಣಿಗೆಗಳೊಂದಿಗೆ ತೆರೆ ಕಂಡಿತು.

ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ, ರಾತ್ರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವಾಲಯಕ್ಕೆ ಹಿಂದಿರುಗಿದ ಸಂದರ್ಭ ಅತ್ಯಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಸಲಾಯಿತು.

ತೆಪ್ಪೊತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಪೂಜೆ, ಉಯ್ಯಾಲೋತ್ಸವ ನಡೆದ ನಂತರ ಮಧ್ಯರಾತ್ರಿ ಕಾವೇರಿ ನದಿಯಲ್ಲಿ ಗಂಗಾ ಸ್ನಾನ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೇವರಾಜ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಗೌರವಾಧ್ಯಕ್ಷ ಗಣೇಶ್, ದೇವಾಲಯ ಸಮಿತಿಯ ಕಾರ್ಯದರ್ಶಿ ಶೇಷಾಚಲ, ಆರ್.ಆರ್. ಕುಮಾರ್ ಇದ್ದರು. ಮಡಿಕೇರಿ, ಏ. 19: ಕೊಡಗಿನ ಅಲ್ಲಲ್ಲಿ ಗ್ರಾಮ ದೇವರುಗಳ ವಾರ್ಷಿಕ ಉತ್ಸವದೊಂದಿಗೆ ಪೂಜಾಧಿ ಜರುಗುವಂತಾಗಿದೆ.

ಕೂಡಿಗೆ: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿವಿಧ ಪೂಜಾ ಕೈಂಕರ್ಯ ಹಾಗೂ ಮೆರವಣಿಗೆಗಳೊಂದಿಗೆ ತೆರೆ ಕಂಡಿತು.

ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ, ರಾತ್ರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವಾಲಯಕ್ಕೆ ಹಿಂದಿರುಗಿದ ಸಂದರ್ಭ ಅತ್ಯಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಸಲಾಯಿತು.

ತೆಪ್ಪೊತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಪೂಜೆ, ಉಯ್ಯಾಲೋತ್ಸವ ನಡೆದ ನಂತರ ಮಧ್ಯರಾತ್ರಿ ಕಾವೇರಿ ನದಿಯಲ್ಲಿ ಗಂಗಾ ಸ್ನಾನ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೇವರಾಜ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಗೌರವಾಧ್ಯಕ್ಷ ಗಣೇಶ್, ದೇವಾಲಯ ಸಮಿತಿಯ ಕಾರ್ಯದರ್ಶಿ ಶೇಷಾಚಲ, ಆರ್.ಆರ್. ಕುಮಾರ್ ಇದ್ದರು. ಮೃತ್ಯುಂಜಯ, ಬ್ರಹ್ಮ, ವಿಷ್ಣು, ಮಹೇಶ್ವರಾಧಿ ಪೂಜಾ ಮತ್ತು ದುರ್ಗಾ ಹೋಮ ನೆರವೇರಿತು. ಮಧ್ಯಾಹ್ನ ಪೂರ್ಣಾಹುತಿ, ಮಹಾ ಮಂಗಳಾರತಿಯಾಗಿ ಪ್ರಸಾದ ವಿನಿಯೋಗವಾಯಿತು. ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾತ್ರಿ ದೇವಿಗೆ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಹುದಿಕೇರಿ: ಸಮೀಪದ ಬೆಳ್ಳೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಿತು. ಏಳು ದಿನಗಳ ಕಾಲ ನಡೆದ ಹಬ್ಬದ ಕೊನೆಯ ದಿನ ದೇವರ ಅವಭೃತ ಸ್ನಾನ, ನೃತ್ಯ ಬಲಿ, ವಸಂತ ಪೂಜೆ, ಅಲಂಕಾರ ಪೂಜೆಗಳು ನಡೆದವು. ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ಮಡಿಕೇರಿ: ಗಾಳಿಬೀಡು ಗ್ರಾಮದ ಒಂದನೇ ಮೊಣ್ಣಂಗೇರಿಯ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಮೇ 11 ರಿಂದ 13 ರವರೆಗೆ ನಡೆಯಲಿದೆ.

ಕಾಸರಗೋಡಿನ ತಂತ್ರಿ ಗೋಪಾಲಕೃಷ್ಣ ಕೆದಿಲ್ಲಾಯ ನೇತೃತ್ವದಲ್ಲಿ ಪ್ರತಿಷ್ಠಾಪನಾ ಮಹೋತ್ಸವವನ್ನು ನಡೆಸಲು ನಿಶ್ಚಯಿಸಿದ್ದು, ಸಂಜೆ 4 ಗಂಟೆಗೆ ಉಗ್ರಾಣ ಪೂಜೆ, 6 ಗಂಟೆಗೆ ಶಿಲ್ಪಿಗಳಿಂದ ಸ್ವೀಕಾರ, 7 ಗಂಟೆಗೆ ಪ್ರಾರ್ಥನೆ ಮತ್ತು ಆಚಾರ್ಯವರಣ, 7.30ಕ್ಕೆ ಸ್ಥಳ ಶುದ್ದಿ ಹಾಗೂ ಸಪ್ತ ಶುದ್ಧಿ, ಅಂಕುರ ಪೂಜೆ, ಗೋಪ್ರವೇಶ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಜಲಾಧಿವಾಸ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಗ್‍ಬಲಿ, ಪ್ರಸಾದ ವಿತರಣೆಯಾಗಲಿದೆ.

ಮೇ 12 ರಂದು ಬೆಳಿಗ್ಗೆ 6 ಗಂಟೆಯಿಂದ ಸ್ಥಳ ಶುದ್ಧಿ, ಅಂಕುರಪೂಜೆ, ಗಣಹೋಮ, ಪಂಚತತ್ವ ಹೋಮ, ಕಲಾಹೋಮ, ದಾನ್ಯಾಧಿವಾಸ, ಅಂಕುರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಅದಿವಾಸಹೋಮ, ಅಂಕುರ ಪೂಜೆ, ದುರ್ಗಾಪೂಜೆ, ಬ್ರಹ್ಮಕಲಶ ಪ್ರತಿಷ್ಟೆ, ದೇವತಾ ಶಯನ ನಡೆಯಲಿದೆ.

ಮೇ 13 ರಂದು ಬೆಳಿಗ್ಗೆ 5 ಗಂಟೆಯಿಂದ ಸ್ಥಳ ಶುದ್ಧಿ, ಮಹಾ ಗಣಹೋಮ ನಡೆಯಲಿದ್ದು, 7.10 ನಿಮಿಷಕ್ಕೆ ವೃಷಭ ಲಗ್ನದಲ್ಲಿ ಪ್ರತಿಷ್ಠೆ, ಮಹಾಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಎಸ್. ಚಂದ್ರಕುಮಾರ್ ಮತ್ತು ಖಜಾಂಚಿ ನವೀನ್ ದೇರಳ ತಿಳಿಸಿದ್ದಾರೆ.