ಶ್ರೀಮಂಗಲ, ಏ. 19 : ಕೊಡವ ಜನಾಂಗದಲ್ಲಿನ ವ್ಯಾಜ್ಯಗಳನ್ನು ಸೌಹಾರ್ಧಯುತವಾಗಿ ಇತ್ಯರ್ಥ ಪಡಿಸಿಕೊಂಡು ಸಹಬಾಳ್ವೆಯಲ್ಲಿ ಬದುಕಲು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸ್ಥಾಪಿಸಿರುವ ಕೊಡವ ನ್ಯಾಯಪೀಠದ ಸದುಪಯೋಗಪಡಿಸಿಕೊಳ್ಳುವಂತೆ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಹೇಳಿದ್ದಾರೆ.ಕೊಡವ ಸಮಾಜದ ಕಛೇರಿಯಲ್ಲಿ ಕಾಪಾಡುವ ನಿಟ್ಟಿನಲ್ಲಿ ಸ್ಥಾಪಿಸಿರುವ ಕೊಡವ ನ್ಯಾಯಪೀಠದ ಸದುಪಯೋಗಪಡಿಸಿಕೊಳ್ಳುವಂತೆ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಹೇಳಿದ್ದಾರೆ.ಕೊಡವ ಸಮಾಜದ ಕಛೇರಿಯಲ್ಲಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೇರುವ ಪ್ರಕರಣಗಳನ್ನು ತಪ್ಪಿಸಿ ಆದಷ್ಟು ಬೇಗ ಸೌಹಾರ್ಧಯುತವಾಗಿ ರಾಜಿ ಪಂಚಾಯಿತಿ ಮೂಲಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಪೀಠ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ವಿಳಂಬವಾಗಿರುವ ಬಹಳಷ್ಟು ಪ್ರಕರಣಗಳು ನ್ಯಾಯಪೀಠದಲ್ಲಿ ಬಗೆಹರಿದಿದೆ ಎಂದು ಅವರು ಹೇಳಿದರು.ನ್ಯಾಯಪೀಠದಲ್ಲಿ ಅಧ್ಯಕ್ಷರಾಗಿ ಚೆರಿಯಪಂಡ ಉತ್ತಪ್ಪ, (ಮೊದಲ ಪುಟದಿಂದ) ಸದಸ್ಯರುಗಳು ಐನಂಡ ಕೆ. ಮಂದಣ್ಣ, ಚೆಪ್ಪುಡಿರ ಪೊನ್ನಪ್ಪ, ಕಳ್ಳಂಗಡ ಗಣಪತಿ, ಮಲ್ಲಮಾಡ ಪ್ರಭುಪೂಣಚ್ಚ, ಮಂಡಚಂಡ ಚೆಟ್ಟಿಯಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಇದಲ್ಲದೇ ಕೊಡವ ಸಮಾಜದ ಮತ್ತೊಂದು ಅಂಗಸಂಸ್ಥೆಯಾಗಿ ನ್ಯಾಯಪೀಠ ಸಮಿತಿಯನ್ನು ಇದೀಗ ಅಸ್ತಿತ್ವಕ್ಕೆ ತರಲಾಗಿದೆ. ಇದರಲ್ಲಿ ಕೊಡವ ಸಮುದಾಯದ ಆಸ್ತಿ-ಪಾಸ್ತಿಗೆ ಧಕ್ಕೆ ಉಂಟಾಗುವ ವಿಚಾರ, ಕೌಟುಂಬಿಕ ವಿವಾದ ಮತ್ತು ಸಾಮಾಜಿಕ ಭದ್ರತೆ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಕೊಡವ ಜನಾಂಗದಲ್ಲಿ ಮಾರಕವಾಗುತ್ತಿರುವ ಕೌಟಂಬಿಕ ವಿವಾದಗಳಾದ ವಿವಾಹ ವಿಚ್ಚೇದನ ಜನಾಂಗದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಸಮಿತಿ ಕೆಲಸ ಮಾಡುತ್ತದೆ ಎಂದು ರಾಜೀವ್ ಬೋಪಯ್ಯ ವಿವರಿಸಿದರು.

ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ ಮಾತನಾಡಿ, ನ್ಯಾಯಪೀಠ ಸಮಿತಿ ಐದು ಜನ ವಕೀಲರನ್ನು ಹೊಂದಿದ್ದು, ಇವರಿಂದ ಅಗತ್ಯವಾದ ಕಾನೂನು ಸಲಹೆಯನ್ನು ಪಡೆದುಕೊಳ್ಳುತ್ತದೆ. ಸಮಿತಿಗೆ ಉಚಿತವಾಗಿ ಕಾನೂನು ನೆರವು ನೀಡಲು ವಕೀಲರುಗಳಾದ ಬಾಚರಣಿಯಂಡ ಅಯ್ಯಪ್ಪ, ಕಳ್ಳಿಚಂಡ ಜಿ. ಅಪ್ಪಣ್ಣ, ಮತ್ರಂಡ ಪಿ. ಪೂವಣ್ಣ, ಬಾನಂಗಡ ಆರ್. ವಿನೋದ್, ಕಳಕಂಡ ಡಿ. ಮುತ್ತಪ್ಪ ಅವರು ಸ್ವಯಂಪ್ರೇರಿತರಾಗಿ ಸೇವೆ ಒದಗಿಸುತ್ತಿದ್ದಾರೆ. ಇದರಲ್ಲಿ ಕಾನೂನು ಸೆಲ್ ರಚಿಸಲಾಗಿದ್ದು, ತಾಂತ್ರಿಕ ಮತ್ತು ಕಾನೂನಾತ್ಮಕವಾಗಿ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಎರಡು ಕಡೆಯವರನ್ನು ಸಾಧ್ಯವಾದಷ್ಟು ಸೌಹಾಧರ್À ಯುತವಾಗಿ, ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಸಮಿತಿ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ಸಮಾಜದ ಕಾರ್ಯದರ್ಶಿ ಪೊನ್ನಿಮಾಡ ಎಸ್. ಸುರೇಶ್ ಅವರು ಮಾತನಾಡಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವದನ್ನು ತಪ್ಪಿಸಲು ಹಾಗೂ ವಿವಾದಗಳು ಅಧಿಕವಾಗುವದನ್ನು ತಪ್ಪಿಸಲು ನ್ಯಾಯ ಸಮಿತಿಯನ್ನು ಸ್ಥಾಪಿಸಲಾಗಿದ್ದು, ಇದು ಕೊಡವ ಸಮಾಜದ ಸದಸ್ಯರಿಗೆ ಮಾತ್ರ ಅನ್ವಯಿಸದೆ ಜನಾಂಗದ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ ಮಾತನಾಡಿ, ಪೊನ್ನಂಪೇಟೆ ಕೊಡವ ಸಮಾಜವು ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪೊನ್ನಂಪೆಟೆಯಲ್ಲಿ ಅಪ್ಪಚ್ಚ ಕವಿ ವಿದ್ಯಾ ಸಂಸ್ಥೆಯನ್ನು ನಡೆಸುತ್ತಾ ಬರುತ್ತಿದೆ. ಈ ವಿದ್ಯಾಸಂಸ್ಥೆ ಈ ವರ್ಷ 25 ವರ್ಷ ಪೂರೈಸಿದ್ದು, ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ. ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಲಚೀರ ಆಶಾ ಗಣೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕವಾಗಿ ವಿದ್ಯಾ ಸಂಸ್ಥೆಯ ಅತೀ ಬಡತನದಲ್ಲಿರುವ 50 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇದರಲ್ಲಿ ಕೊಡವ ಸಮಾಜದಿಂದ 30 ಹಾಗೂ ಇತರ ಸಂಘ ಸಂಸ್ಥೆಗಳ ನೆರವು ಹಾಗೂ ಉಚಿತ ಶಿಕ್ಷಣ ನೀಡಲಾಗುತ್ತದೆ. ಬಡತನದಲ್ಲಿರುವ ಮಕ್ಕಳ ವಿದ್ಯಾಶ್ರಯ ಕೇಳಿ ಬರುತ್ತಿದ್ದು ಇದಕ್ಕೆ ವಿದ್ಯಾಭಿಮಾನಿಗಳು ಆರ್ಥಿಕ ನೆರವು ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಕೋರಿದರು.

ರೂ. 25 ಸಾವಿರ ದಂಡ : ಖಜಾಂಚಿ ಮೂಕಳೇರ ಲಕ್ಷ್ಮಣ್ ಮಾತನಾಡಿ, 2018 ನೇ ಸೆಪ್ಟೆಂಬರ್‍ನಿಂದ ಕೊಡವ ಸಮಾಜದ ಮಹಾಸಭೆ ತೀರ್ಮಾನದಂತೆ ಗಂಗಾಪೂಜೆ ಸಂದರ್ಭ ಮೂರು ಗಂಟೆ ಮಾತ್ರ ವಧುವನ್ನು ತಡೆದು ಸಂಭ್ರಮಿಸಲು ಅವಕಾಶವಿದ್ದು, ಈ ನಿಯಮ ಉಲ್ಲಂಘಿಸಿದರೆ ರೂ. 25 ಸಾವಿರ ದಂಡ ವಿಧಿಸುವಂತೆ ನಿಯಮ ಜಾರಿ ಮಾಡಲಾಗಿದೆ. ತದನಂತರ ಈ ತೀರ್ಮಾನಕ್ಕೆ ಸಮಾಜದಲ್ಲಿ ಮದುವೆ ಸಮಾರಂಭ ಮಾಡಿದ ಎಲ್ಲರೂ ಸಹಕಾರ ನೀಡಿದ್ದಾರೆ, ಮುಂದೆಯೂ ಸಹಕಾರ ನೀಡಬೇಕು ಎಂದು ಹೇಳಿದರು.

ನಿರ್ದೇಶಕ ಚೆಪ್ಪುಡೀರ ರಾಕೇಶ್ ದೇವಯ್ಯ ಮಾತನಾಡಿ, ಪ್ರತಿ ವರ್ಷ ಸಮಾಜದ ಆಶ್ರಯದಲ್ಲಿ ಕೊಡವ ಕಲೆ, ಸಂಸ್ಕøತಿಯನ್ನು ಕಲಿಕೆಗೆ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಉಮ್ಮತಾಟ್À, ಪರೆಯಕಳಿ, ಪುತ್ತರಿ ಕೋಲಾಟ್, ಬಾಳೋಪಾಟ್, ಕತ್ತಿಯಾಟ್, ಕಪ್ಪೆಯಾಟ್ ಉಚಿತ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಸಮಾಜದಿಂದ ಇವೆಲ್ಲ ಕಲಿಕ ತಂಡಗಳನ್ನು ಹೊಂದಿದೆ. ಇದರ ಸಂಚಾಲಕರಾಗಿ ಜಾನಪದ ತಜ್ಞ, ಕಾಳಿಮಾಡ ಮೋಟಯ್ಯ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುವದು ಹೆಮ್ಮೆಯ ವಿಚಾರವೆಂದು ಅವರು ಹೇಳಿದರು.

ಈ ಸಂದರ್ಭ ಸಮಾಜದ ಖಾಯಂ ಆಹ್ವಾನಿತರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ ನಿರ್ದೇಶಕರುಗಳಾದ ಮೂಕಳಮಾಡ ಅರಸುನಂಜಪ್ಪ, ಅಡ್ಡಂಡ ಸುನಿಲ್ ಸೋಮಯ್ಯ, ಮಂಡಚಂಡ ಚೆಟ್ಟಿಯಪ್ಪ, ಚೆಪ್ಪುಡಿರ ಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.