ಗುಡ್ಡೆಹೊಸೂರು, ಏ. 19: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ನಿವಾಸಿ ಬೇರಿಕೆ ಮನೆ ದಿ.ಮೋಹನ್‍ರಾಜ್ ಎಂಬವರ ಪುತ್ರ ಸುಮಲ್(24) ತನ್ನ ಗೆಳೆಯರ ತಂಡದ ಜೊತೆ ಈಜಲು ತೆರಳಿದ್ದಾನೆ. ಅತಿಯಾದ ಗುಂಡಿ ಜಾಗದಲ್ಲಿ ಈಜುವ ಸಂದರ್ಭ ಸುಮಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸುಮಲ್ ಒಬ್ಬನೆ ಪುತ್ರನಾಗಿದ್ದು, ಆತನ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ನಂಜರಾಯಪಟ್ಟಣ ಗ್ರಾಮದ ಕಾವೇರಿ ನದಿಯಲ್ಲಿ ಈ ಘಟನೆ ನಡೆದಿದೆ. ಸುಮಲ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಸುಮಲ್ ಮೃತದೇಹ ತಡರಾತ್ರಿಯಲ್ಲಿ ಪತ್ತೆಯಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.