ಮಡಿಕೇರಿ, ಏ.17: ಕಳೆದ ಪ್ರಾಕೃತಿಕ ವಿಕೋಪ ಸಂದರ್ಭ ಸಂಪಾಜೆ ಮತ್ತು ಕೊಯನಾಡುವಿನಲ್ಲಿ ಭೂ ಕುಸಿತದಿಂದ ಆನೆಗಳ ಎಂದಿನ ಸಂಚಾರ ಮಾರ್ಗ ತಪ್ಪಿ ಹೋಗಿದೆ. ಆ ಬಳಿಕ ದಾರಿ ತಪ್ಪಿದ ಏಳು ಆನೆಗಳು ತಣ್ಣ್ಣಿಮಾನಿ ಮತ್ತು ತಾವೂರು ಗ್ರಾಮಗಳಲ್ಲಿ ಬಂದು ಸೇರಿಕೊಂಡಿವೆ ಎಂದು ಗ್ರಾಮಸ್ಥ್ತರು “ಶಕ್ತಿ” ಗೆ ತಿಳಿಸಿದ್ದಾರೆ.ತಣ್ಣ್ಣಿಮಾನಿ ಗ್ರಾಮದಲ್ಲಿ ಕೆ.ಜೆ. ಭರತ್ ಅವರಿಗೆ ಸೇರಿದ 9 ಎಕರೆ ತೋಟದಲ್ಲಿ ಸುಮಾರು 2 ಎಕರೆ ಪ್ರದೇಶದ ಕಾಫಿ ತೋಟದಲ್ಲಿ ಆನೆಗಳು ಗಿಡಗಳನ್ನು ಕೆಡವಿ ಹಾಕಿವೆ. ತಾವೂರು ಗ್ರಾಮದಲ್ಲಿ ನಾರಾಯಣ ನಾಯಕ್ ಅವರ ಸುಮಾರು 1 ಎಕರೆ ಕಾಫಿ ತೋಟವನ್ನು ಹಾಳುಗೆಡಹಿವೆ.ತಣ್ಣಿಮಾನಿ (ಮೊದಲ ಪುಟದಿಂದ) ಗ್ರಾಮದಲ್ಲಿ ಕುದುಪಜೆ ಪುರುóಷೋತ್ತಮ ಅವರ ತೋಟವೂ ಹಾನಿಗೀಡಾಗಿದೆ.ಆನೆಗಳೇ ಅಲ್ಲದೆ ಎರಡು ಕಾಡು ಕೋಣಗಳು ಕೂಡ ದಾರಿ ತಪ್ಪಿ ತಾವೂರು ಗ್ರಾಮ ಸೇರಿಕೊಂಡಿವೆ. ಈ ಕಾಡು ಕೋಣಗಳ ಸಂಚಾರವನ್ನು ಸ್ವತಃ ಕೋಳಿಬೈಲು ನಾರಾಯಣ ಅವರು ಪ್ರತ್ಯಕ್ಷ ವೀಕ್ಷಿಸಿದ್ದಾರೆ. ಒಂದೆಡೆ ಆಸ್ತಿ ಪಾಸ್ತಿ ನಷ್ಟ , ಇನ್ನೊಂದೆಡೆ ನಡೆದಾಡಲೂ ಭೀತಿ ಈ ಗ್ರಾಮಗಳಲ್ಲಿ ಎದುರಾಗಿದೆ. ಅರಣ್ಯ ಇಲಾಖೆಗೆ ಸಾಕಷ್ಟು ಮನವಿಗಳನ್ನು ನೀಡಿದರೂ ಇದುವರೆಗೆ ಬೆಳೆ ಹಾನಿಗೆ ಪರಿಹಾರ ದೊರಕಿಲ್ಲ್ಲ ಎಂದು ಕೆ.ಜೆ. ಭರತ್ “ಶಕ್ತಿ” ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.ಈ ಬಗ್ಗೆ ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಧುಗಿರಿ ಲಿಂಗಪ್ಪ ಮಂಜುನಾಥ್ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಈಗಾಗಲೇ ನಷ್ಟ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು ಕೋರಿ ಸರಕಾರಕ್ಕೆ ವರದಿ ಸಲ್ಲಿಸಿರುವದಾಗಿ ಅವರು ಮಾಹಿತಿಯಿತ್ತರು. ಸುಮಾರು ರೂ. 40 ಲಕ್ಷ ಪರಿಹಾರ ಮೊತ್ತ ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು ನಷ್ಟಗೊಂಡ ಬೆಳೆಗಾರರಿಗೆ ವಿತರಿಸುವದಾಗಿ ಅವರು ಭರವಸೆಯಿತ್ತರು.