ಭಾಗಮಂಡಲ, ಏ. 17: ಲೋಕಸಭಾ ಚುನಾವಣೆಯ ಸಲುವಾಗಿ ತಾ. 18ರಂದು (ಇಂದು) ಶಾಂತಿಯುತ ಮತದಾನ ನಡೆಸುವ ದಿಸೆಯಲ್ಲಿ ಕೊಡಗಿನ ಗಡಿಯುದ್ದಕ್ಕೂ ಕುಟ್ಟದಿಂದ ಪುಷ್ಪಗಿರಿ ತಪ್ಪಲಿನವರೆಗೆ ನಕ್ಸಲ್ ನಿಗ್ರಹಪಡೆ ವ್ಯಾಪಕ ಕೋಂಬಿಂಗ್ ಆರಂಭಿಸಿದೆ. ಆ ಮೂಲಕ ಗ್ರಾಮೀಣ ಮತಗಟ್ಟೆಗಳಲ್ಲಿ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗ ದರ್ಶನದಲ್ಲಿ ಜಿಲ್ಲೆಯ ನಕ್ಸಲ್ ಪೀಡಿತ ಮತಗಟ್ಟೆ ಪ್ರದೇಶಗಳಲ್ಲಿ ಬಿ.ಎಸ್.ಎಫ್. ಸಿಬ್ಬಂದಿ ಸಹಿತ ಕಣ್ಗಾವಲು ಇರಿಸಿದ್ದು, ನಕ್ಸಲ್ ನಿಗ್ರಹಪಡೆ ಅರಣ್ಯದ ಅಂಚಿನಲ್ಲಿ ನಿರಂತರ ಕೋಂಬಿಂಗ್ ಮುಂದು ವರೆಸಿದೆ ಎಂದು ವಿಶ್ವಸನೀಯ ಮೂಲದಿಂದ ಗೊತ್ತಾಗಿದೆ.ಅಲ್ಲದೆ, ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಕೇರಳ ಗಡಿಗಳಾದ ಕುಟ್ಟ, ಮಾಕುಟ್ಟ, ಕರಿಕೆ ಹಾಗೂ ಇತರ ಜಿಲ್ಲಾ ಗಡಿಗಳಲ್ಲಿ ಕೂಡ ಎಲ್ಲಾ ವಾಹನಗಳ ತೀವ್ರ ತಪಾಸಣೆ ಮುಖಾಂತರ ಯಾವದೇ ಅಕ್ರಮಗಳಿಗೆ ಅವಕಾಶವಾಗದಂತೆ ಹದ್ದುಗಣ್ಣು ಇಟ್ಟಿರುವದಾಗಿ ತಿಳಿದುಬಂದಿದೆ.

ಬಿರುಸಿನ ತಪಾಸಣೆಕರಿಕೆ : ಲೋಕಸಭಾ ಚುನಾವಣೆ ಹಿನೆÀ್ನಲೆಯಲ್ಲಿ ಗಡಿಭಾಗದ ಕರಿಕೆ ಚೆಕ್ ಪೋಸ್ಟ್‍ನಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಂದ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.

-ಕೆ.ಡಿ. ಸುನಿಲ್, ಸುಧೀರ್.