ಗೋಣಿಕೊಪ್ಪ ವರದಿ, ಏ. 17 : ಒಂಟಿ ಸಲಗ ದಾಳಿಗೆ ಸಿಲುಕಿ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ತೋಟದ ಮನೆಯಲ್ಲಿ ವಾಸವಿರುವ ಪಂಜಿರಿ ಎರವರ ಮಾರಾ (65) ಗಾಯಾಳುವಾಗಿದ್ದು, ಕಾಲು ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಕುರ್ಚಿ ಗ್ರಾಮದ ಅಜ್ಜಮಾಡ ಸುಬ್ರಮಣಿ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಧಾಳಿ ಪಂಜಿರಿ ಎರವರ ಮಾರಾ (65) ಗಾಯಾಳುವಾಗಿದ್ದು, ಕಾಲು ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಕುರ್ಚಿ ಗ್ರಾಮದ ಅಜ್ಜಮಾಡ ಸುಬ್ರಮಣಿ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಧಾಳಿ (ಮೊದಲ ಪುಟದಿಂದ) ಕರುಣಾ ಟ್ರಸ್ಟ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲು ನೆರವಾದರು. ವೈದ್ಯ ಡಾ. ಗೌತಂ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟರು.ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಅಧಿಕಾರಿ ವೀರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚಿಕಿತ್ಸಾ ವೆಚ್ಚಕ್ಕೆ ಹಣ ನೀಡಿದ ಅಧಿಕಾರಿ : ದಾಳಿ ವಿಚಾರ ತಿಳಿಯುತ್ತಿದ್ದಂತೆ ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಮುಖಂಡರುಗಳು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡರು. ಚರ್ಚೆ ನಡೆಸಿದ ರೈತ ಮುಖಂಡರುಗಳು, ತುರ್ತಾಗಿ ಚಿಕಿತ್ಸೆಗೆ ಪರಿಹಾರ ಧನ ನೀಡುವಂತೆ ಒತ್ತಾಯಿಸಿದಂತೆ ಗಾಯಾಳು ಮಾರಾ ಅವರ ಮಗ ಸಿದ್ದ ಅವರಿಗೆ ವಲಯ ಅಧಿಕಾರಿ ವೀರೇಂದ್ರ ರೂ. 10 ಸಾವಿರ ಚಿಕಿತ್ಸಾ ವೆಚ್ಚ ನೀಡಿದರು.
ಸಿಬ್ಬಂದಿ ಬದಲಾಯಿಸಲು ಒತ್ತಾಯ : ಕುರ್ಚಿ ಭಾಗದಲ್ಲಿ ಕಾಡಾನೆ ಬಗ್ಗೆ ನಿಗಾ ವಹಿಸಲು ಅರಣ್ಯ ಇಲಾಖೆ ನೇಮಿಸಿರುವ ಸಿಬ್ಬಂದಿ ಮನಸೋ ಇಚ್ಚೆ ರಜೆಯಲ್ಲಿರುವದರಿಂದ ಗ್ರಾಮಕ್ಕೆ ಕಾಡಾನೆ ನುಸುಳುವ ಬಗ್ಗೆ ಮಾಹಿತಿ ಇಲಾಖೆಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಇಲಾಖೆ ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ಮೂಲಕ ಬೇರೆ ಸಿಬ್ಬಂದಿ ನೇಮಿಸಲು ಒತ್ತಾಯಿಸುವದಾಗಿ ಚಿಮ್ಮಂಗಡ ಗಣೇಶ್ ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಮಂಜುನಾಥ್, ಆಸ್ಪತ್ರೆಗೆ ಭೇಟಿ ಗಾಯಾಳುವಿನ ಆರೋಗ್ಯ ಕ್ಷೇಮ ವಿಚಾರಿಸಿದರಲ್ಲದೆ, ಅರಣ್ಯಾಧಿಕಾರಿ ಯೊಂದಿಗೆ ಗಾಯಾಳು ವಿಗೆ ನೆರವು ನೀಡುವ ಕುರಿತು ಚರ್ಚಿಸಿದರು. ಈ ಸಂದರ್ಭ ರೈತ ಮುಖಂಡರುಗಳಾದ ಅಯ್ಯಮಾಡ ಹ್ಯಾರಿ ಸೋಮೇಶ್, ಮಚ್ಚಮಾಡ ರಂಜಿ, ಚಂಗುಲಂಡ ರಾಜಪ್ಪ, ಶ್ರೀಮಂಗಲ ಗ್ರಾ. ಪಂ. ಸದಸ್ಯ ಅಜ್ಜಮಾಡ ಜಯ ಇದ್ದರು.
-ಸುದ್ದಿಪುತ್ರ /ಜಗದೀಶ್