ಗೋಣಿಕೊಪ್ಪಲು, ಏ. 15: ಗೋಣಿಕೊಪ್ಪಲುವಿನ ಆರ್.ಎಂ.ಸಿ. ಆವರಣದಿಂದ ಉಮಾಮಹೇಶ್ವರಿ ದೇವಸ್ಥಾನ ತನಕ ಭಾಜಪ ವತಿಯಿಂದ ರೋಡ್ ಶೋ ನಡೆಯಿತು. ಈ ವೇಳೆ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಬಿಜೆಪಿ ಪ್ರಮುಖರಾದ ಕಿಲನ್ ಗಣಪತಿ, ಗಾಂಧಿ, ರಾಜೇಶ್ ಹಾಗೂ ಭಾಜಪ, ಸಂಘ ಪರಿವಾರದ ಪ್ರಮುಖರು ಹಾಜರಿದ್ದರು. ನಗರಾದ್ಯಂತ ಮೋದಿ ಮೋದಿ ಘೋಷಣೆ ಮೊಳಗಿತು.