ಮಡಿಕೇರಿ, ಏ. 13: ಕ್ಷೇತ್ರದ ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾ ರೆಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ನೆರವಂಡ ಉಮೇಶ್, ಸಮಾಜವನ್ನು ಒಡೆÉಯುವ ರಾಜಕಾರಣಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಕಸ್ತೂರಿ ರಂಗನ್ ವರದಿಯ ವಿವಾದಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ನಡೆದ ಪಕ್ಷಾತೀತ ಸಭೆಯಲ್ಲಿ ಪ್ರತಾಪ ಸಿಂಹ ಅವರು ರಾಜಕೀಯ ಬೆರೆಸಲು ಮುಂದಾದಾಗ ಖುದ್ದು ಶಾಸಕ ಬೋಪಯ್ಯ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಜೆಡಿಎಸ್ ಶಾಸಕ ವೈಎಸ್‍ವಿ ದತ್ತ ವೇದಿಕೆಯಿಂದ ನಿರ್ಗಮಿಸಿದ್ದರು ಎಂದು ನೆನಪಿಸಿದರು.

ರಾಜ್ಯದ ಮೈತ್ರಿ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಮಾಡಿದ್ದು, ಕೇಂದ್ರದಿಂದ ಯಾವದೇ ಸಹಾಯ ದೊರೆತಿಲ್ಲ. ಕೊಡಗಿನ ಸಮಸ್ಯೆಗಳ ಬಗ್ಗೆ ಪ್ರತಾಪ ಸಿಂಹ ಅವರು ಕಾಳಜಿ ವಹಿಸಿಲ್ಲ.

ಇದೇ ಕಾರಣಕ್ಕೆ ಇಂದು ಅವರು ತಮ್ಮ ಹೆಸರಿನ ಮೂಲಕ ಅಥವಾ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮೂಲಕ ಮತಯಾಚಿಸದೆ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತಯಾಚಿ ಸುತ್ತಿದ್ದಾರೆ ಎಂದು ಉಮೇಶ್ ಟೀಕಿಸಿದರು.

ಮಡಿಕೆÉೀರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಇ. ಮ್ಯಾಥ್ಯು ಮಾತನಾಡಿ, ಕೊಡಗಿಗೆ ರೈಲು ಸಂಪರ್ಕ ಕಲ್ಪಿಸದಿದ್ದಲ್ಲಿ ಚುನಾವಣೆ ಯಲ್ಲಿ ಸ್ಪರ್ಧಿಸುವದಿಲ್ಲವೆಂದು ಹೇಳಿಕೊಂಡಿದ್ದ ಪ್ರತಾಪ ಸಿಂಹವರು ಬೇಡಿಕೆ ಈಡೇರದಿದ್ದರೂ ಈಗ ಹೇಗೆ ಚುನಾವಣಾ ಕಣದಲ್ಲಿದ್ದಾ ರೆಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಉಪಸ್ಥಿತರಿದ್ದರು.