ಮಡಿಕೇರಿ, ಏ. 13: ತಾ. 12 ರಂದು ಗಾಳಿಬೀಡುವಿನಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಾತ್ಯತೀತ ಜನತಾದಳದ ಜಿಲ್ಲಾ ಉಪಾಧ್ಯಕ್ಷ ಯಲದಾಳು ಕೇಶವನಂದ ವಹಿಸಿದ್ದರು. ಮಾತನಾಡಿ ಬಿ.ಜೆ.ಪಿ.ಯ ದುರಾಡಳಿತವನ್ನು ಖಂಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಮಾತನಾಡಿ, ಸಂಸದ ಪ್ರತಾಪ ಸಿಂಹ ಕೇಂದ್ರ ವಾಣಿಜ್ಯ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸದೆ ಕರಿಮೆಣಸು ಬೆಲೆ ಕುಸಿತಕ್ಕೆ ನೇರ ಹೊಣೆ ಎಂದು ಆರೋಪಿಸಿದರು.
ಸಭೆಯಲ್ಲಿ ವಲಯ ಅಧ್ಯಕ್ಷ ಕೋಳಿಮುಡಿಯನ ಅನಂತ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಭಾಷ್ ಆಳ್ವ, ಜಯಲಕ್ಷ್ಮಿ ಎನ್.ಕೆ., ಕೆ.ಪಿ. ಲಿಂಗರಾಜು, ಪುಷ್ಪ ಪೂಣಚ್ಚ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ವೆಂಕಟೇಶ್, ಬ್ಲಾಕ್ ಉಪಾಧ್ಯಕ್ಷ ಪ್ಯಾಟ್ರಕ್ ಲೋಬೋ, ಪೂವಯ್ಯ, ಪುಲಿಯಂಡ ಜಗದೀಶ್, ಪ್ರಭು ರೈ, ಮಾರ್ಷಲ್, ಎಂ.ಕೆ. ಬಷೀರ್, ಪೊನ್ನಪ್ಪ ಎ.ಎ., ಗಣೇಶ ಕೆ.ಕೆ., ಕೆ.ಪಿ. ಗಣಪತಿ ಮುಂತಾದವರು ಹಾಜರಿದ್ದರು.