ನಾಪೋಕ್ಲು, ಏ. 13: ನಾಪೆÇೀಕ್ಲು ಕೊಡವ ಸಮಾಜ ಕ್ರೀಡಾ, ಸಾಂಸ್ಕøತಿಕ ಮತ್ತು ಮನರಂಜನಾ ಕೂಟದ ವತಿಯಿಂದ ಆಯೋಜಿತ ಕೊಡವ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ನಾಪೆÇೀಕ್ಲು ಕೊಡವ ಸಮಾಜ ಕಟ್ಟಡದಲ್ಲಿರುವ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡವ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಕೊಡವ ಸಮಾಜದ ರಿಕ್ರೀಯೇಷನ್ ಕ್ಲಬ್ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ಕೊಡವ ಸಮುದಾಯಗಳ ನಡುವಿನ ಕೊಡವ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಸಮುದಾಯದ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತೆ ಕರೆ ನೀಡಿದರು.
ಪಂದ್ಯಾವಳಿಯ ಪೋಷಕರಾದ ಕುಲ್ಲೇಟಿರ ಶಂಭು ಮಂದಪ್ಪ, ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ಹತ್ತು ವಿಭಾಗಗಳಲ್ಲಿ ನಡೆಯಲಿರುವ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸುಮಾರು 125 ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಕೊಡವ ಸಮಾಜ ಕ್ರೀಡಾ, ಸಾಂಸ್ಕøತಿಕ ಮತ್ತು ಮನರಂಜನಾ ಕೂಟದ ಕಾರ್ಯದರ್ಶಿ ಮಣವಟ್ಟೀರ ದಯಾ ಕುಟ್ಟಪ್ಪ, ಕೊಡವ ಸಮಾಜ ನಿರ್ದೇಶಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕಣ್ಣಂಬೀರ ಸುದಿ ತಿಮ್ಮಯ್ಯ, ಕುಲ್ಲೇಟಿರ ಅಜಿತ್ ಮತ್ತು ಬೊಪ್ಪೇರ ಜಯ, ಕುಲ್ಲೇಟಿರ ಶಾಂತ, ಕುಲ್ಲೇಟಿರ ಅಶೋಕ್, ಲೋಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.