ಒಡೆಯನಪುರ, ಏ. 13: ರೋಟರಿ ಸಂಸ್ಥೆಯಲ್ಲಿ ಮಹಿಳಾ ಸದಸ್ಯತ್ವವನ್ನು ಹೆಚ್ಚಾಗಿ ನೋಂದಾಯಿಸಿಕೊಳ್ಳುವ ಮೂಲಕ ರೋಟರಿ ಮಹಿಳಾ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಅಭಿಪ್ರಾಯಪಟ್ಟರು. ಸ್ಥಳೀಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ಹೋಬಳಿ ರೋಟರಿ ಕ್ಲಬ್ ವತಿಯಿಂದ ವಿವಿಧ ಸಾಮಗ್ರಿಗಳ ವಿತರಣೆ ಮತ್ತು ವರ್ಕ್ಶಾಪ್ ಕಾರ್ಮಿಕರಿಗೆ ಉಚಿತ ಟಿ.ಟಿ. ಚುಚ್ಚುಮದ್ದು ಕಾರ್ಯಕ್ರಮದ ನಂತರ ನಡೆದ ಪದಾಧಿಕಾರಿಗಳ ಸಭೆಯನ್ನು ಮಾತನಾಡುತ್ತಿದ್ದರು.
ನಿರಾಶ್ರಿತರಿಗಾಗಿ 25 ಮನೆಗಳನ್ನು ನಿರ್ಮಿಸಿಕೊಟ್ಟಿದೆ; ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆಯ ಮತ್ತಷ್ಟು ಪ್ರಗತಿಗಾಗಿ ಪದಾಧಿಕಾರಿಗಳು ಒಗ್ಗಟ್ಟಾಗಿ ಶ್ರಮಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್, ಶನಿವಾರಸಂತೆ ರೋಟರಿ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ರೋಟರಿ ಉಪಾಧ್ಯಕ್ಷ ಸುಬ್ಬು ಮುಂತಾದವರಿದ್ದರು.