ಕೂಡಿಗೆ 12 ಕಣಿವೆಯಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ನಡೆಯುವ ಬ್ರಹ್ಮ ರಥೋತ್ಸವ ಮೊದಲ ದಿನವಾದ ಶುಕ್ರವಾರ ಸಂಜೆ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ವೇದ ಬ್ರಹ್ಮ ನರಹರಶರ್ಮಾ ನೆರವೇರಿಸಿದರು. ಈ ಸಂದರ್ಭ ಶಿರಂಗಾಲ, ಕೂಡಿಗೆ, ಕಣಿವೆ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ ಅವರ ಕುಟುಂಬದವರು ವಧು ವರರ ಕಡೆಗಳ ರೂಪದಲ್ಲಿ ಭಾಗವಹಿಸಿದ್ದರು.