ಮಡಿಕೇರಿ, ಏ. 13: ಕೈಕಾಡು ಗ್ರಾಮದ ಎರಡು ವರ್ಷಕ್ಕೊಮ್ಮೆ ನಡೆಯುವ ಮಕ್ಕೋಟು ಮಹಾಲಕ್ಷ್ಮಿ ದೇವರ ಉತ್ಸವ ಮಾರ್ಚ್ 29 ರಿಂದ ಆರಂಭಗೊಂಡಿದ್ದು, ತಾ. 15ರ ವರೆಗೆ ನಡೆಯಲಿದೆ. ತಾ. 14 ರಂದು (ಇಂದು) ಪಟ್ಟಣಿ, ಸಂಜೆ 4 ಗಂಟೆಗೆ ಅಯ್ಯಪ್ಪ ತೆರೆ ನಡೆಯಲಿದೆ.
ತಾ. 15 ರಂದು ಬೆಳಿಗ್ಗೆ 9 ಗಂಟೆಗೆ ಎತ್ತು ಪೋರಾಟ, ನೆರೆಯಂಡಮ್ಮಂಡ ಕುಟುಂಬಸ್ಥರ ಮನೆಯಿಂದ ಭಂಡಾರ ಇಳಿಸುವದು, ನಂತರ ದೇವಾಲಯದಲ್ಲಿ ನೃತ್ಯ, ಮಧ್ಯಾಹ್ನ 1.30 ಗಂಟೆಗೆ ಅನ್ನದಾನ ನಡೆಯಲಿದೆ. ರಾತ್ರಿ 8.30 ಗಂಟೆಗೆ ನೃತ್ಯಬಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.