ಭಾಗಮಂಡಲ, ಏ. 11: ಮಾವ ಹಾಗೂ ಅಳಿಯನ ನಡುವಿನ ದ್ವೇಷ ಸಾಧನೆಯೊಂದಿಗೆ ಕುಡಿತದ ಅಮಲಿನಲ್ಲಿ; ದೊಣ್ಣೆಯಿಂದ ಹೊಡೆದು ಮಾವನನ್ನು ಸಾಯಿಸಿರುವ ಕೃತ್ಯ ತಾ. 9ರಂದು ರಾತ್ರಿ ಸಂಭವಿಸಿದೆ. ಚೇರಂಬಾಣೆಯ ತೋಟವೊಂದರಲ್ಲಿ ಕಾರ್ಮಿಕನಾಗಿದ್ದ ಮಾವ ರಾಜು (53) ಎಂಬಾತನನ್ನು ಅಳಿಯ ಸುರೇಶ್ (28) ಹೊಡೆದು ಸಾಯಿಸಿರುವ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಚೇರಂಬಾಣೆಯಲ್ಲಿ ತನ್ನ ತಾಯಿಯ ಅಣ್ಣ ರಾಜು ಕೆಲಸ ಮಾಡುತ್ತಿದ್ದ ತೋಟಕ್ಕೆ ಆಗಿಂದಾಗ್ಗೆ ಬರುತ್ತಿದ್ದ ಆರೋಪಿ ಸುರೇಶ್ ಮೇಲಿನ ಅಕ್ರಮ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿರುವ ದಾಗಿ ತಿಳಿದು ಬಂದಿದೆ. ಅಲ್ಲಿನ ಬಿ. ಬಾಡಗ ನಿವಾಸಿ ಯಾಗಿರುವ ಈತ ತಾ. 9ರಂದು ರಾತ್ರಿ ಕೊಲೆಗೈದು ಪರಾರಿಯಾಗಿದ್ದಾನೆ. (ಮೊದಲ ಪುಟದಿಂದ) ಇಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುವದರೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ತಾ. 9ರಂದು ಆರೋಪಿಯು ಮಾವ ರಾಜು ಹಾಗೂ ಅತ್ತೆ ಪಾರ್ವತಿಗೂ ಥಳಿಸಿದ್ದಲ್ಲದೆ, ಮೃತನ ಪುತ್ರ ರಮೇಶ್‍ಗೆ ಕೊಲೆ ಬೆದರಿಕೆವೊಡ್ಡಿದ್ದಾನೆ. ತೀವ್ರ ಹಲ್ಲೆಗೆಒಳಗಾಗಿರುವ ರಾಜು ಮಧ್ಯರಾತ್ರಿ ಕೊನೆಯುಸಿರೆಳಿದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.