ಮಡಿಕೇರಿ, ಏ. 11: ಗಾಜಿಯಾ ಬಾದ್‍ನ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಟೆಕ್ನಾಲಜಿಯಲ್ಲಿ 2017-19ನೇ ಸಾಲಿನ ಎಂಬಿಎ (ಮಾರ್ಕೆಟಿಂಗ್)ನಲ್ಲಿ ಕೊಡಗಿನ ಯುವತಿ ಮೂಲತಃ ನಾಪೋಕ್ಲು ವಿನವರಾದ ಬೊಪ್ಪಂಡ ದಿಯಾ ಚಿನ್ನದ ಪದಕದೊಂದಿಗೆ ಮೊದಲ ರ್ಯಾಂಕ್‍ಗಳಿಸಿದ್ದಾಳೆ. ಇತ್ತೀಚೆಗೆ ಗಾಜಿಯಾಬಾದ್‍ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ಪಂಥ್, ಟಾಟಾ ಸಂಸ್ಥೆಯ ಅಧ್ಯಕ್ಷ ನಟರಾಜನ್ ಚಂದ್ರಶೇಖರ್ ಅವರುಗಳು ಪ್ರಶಸ್ತಿ ಪ್ರದಾನ ಮಾಡಿದರು. ಈಕೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೊಪ್ಪಂಡ ಸುಬ್ರಮಣಿ ಹಾಗೂ ಆಶಾ ದಂಪತಿಯ ಪುತ್ರಿ.