ಮಡಿಕೇರಿ, ಏ. 11: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಸಿಯೇಶನ್ ವತಿಯಿಂದ 14 ರಿಂದ 19 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ಸಂಬಂಧ ಕೊಡಗು ಜಿಲ್ಲಾ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 14 ವರ್ಷದೊಳಗಿನವರ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.15ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. 2005 ಸೆಪ್ಟೆಂಬರ್ 1ರ ನಂತರ ಜನಿಸಿದವರು ಭಾಗವಹಿಸಬಹುದಾಗಿದೆ. 16 ವರ್ಷದೊಳಗಿನವರ ತಂಡಕ್ಕೆ ತಾ.16ರಂದು ಗೊಣಿಕೊಪ್ಪ ಕಾಪ್ಸ್ ಶಾಲಾ ಮೈದಾನದಲ್ಲಿ ನಡೆಯಲಿದೆ. 2003 ಸೆಪ್ಟೆಂಬರ್ 1ರ ನಂತರ ಜನಿಸಿದವರು ಪಾಲ್ಗೊಳ್ಳಬಹುದಾಗಿದೆ. 19 ವರ್ಷದೊಳಗಿನವರ ತಂಡಕ್ಕೆ ತಾ.17ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯಲಿದೆ. 2000 ಸೆಪ್ಟೆಂಬರ್ 1ರ ನಂತರ ಜನಿಸಿದವರು ಭಾಗವಹಿಸಬಹದಾಗಿದೆ. ಆಸಕ್ತ ಆಟಗಾರರು ನಿಗದಿಪಡಿಸಿದ ದಿನಾಂಕದಂದು ಬೆಳಿಗ್ಗೆ 8 ಗಂಟೆಗೆ ಜನನ ಪ್ರಮಾಣ ಪತ್ರದ ಮೂಲ ಹಾಗೂ ನಕಲು ಪ್ರತಿಗಳೊಂದಿಗೆ ಹಾಜರಿರಬೇಕಿದೆ.

ಆಯ್ಕೆಯಾದ ಬಳಿಕ ತರಬೇತಿ ಶಿಬಿರವು ತಾ.18ರಿಂದ 24ರವರೆಗೆ ನಡೆಯಲಿದೆ. ಅಂತರ ಜಿಲ್ಲಾ ಪಂದ್ಯಾವಳಿಗಳು ತಾ. 25 ರಿಂದ 30 ರವರೆಗೆ ನಡೆಯಲಿದೆ. ಕೆಎಸ್‍ಸಿಎ ತರಬೇತಿ ಶಿಬಿರವು ಮೇ 2ರಿಂದ 26ರವರೆಗೆ ನಡೆಯಲಿದೆ. ಹೆಚ್ಚಿನ ಮಹಿತಿಗೆ ಮೊ.9980060322, 9945273688 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಾಂಡರರ್ಸ್ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.