ಕೂಡಿಗೆ, ಏ. 11: ಕೂಡಿಗೆ-ಬಸವನತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಬೂತ್ ಸಮಿತಿಯ ವತಿಯಿಂದ ಬಿಜೆಪಿ ಪರ ಮತಯಾಚನೆ ನಡೆಸಲಾಯಿತು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರ ಮತಯಾಚನೆ ಮಾಡುತ್ತಾ, ಕೇಂದ್ರ ಸರಕಾರದ ಯೋಜನೆಗಳ ಕರಪತ್ರಗಳನ್ನು ಮನೆ ಮನೆಗಳಿಗೆ ಹಂಚುವ ಮೂಲಕ ಕೂಡಿಗೆ ಡೈರಿ ಸರ್ಕಲ್, ಬಸವನತ್ತೂರು ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭ ಕುಶಾಲನಗರ ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ತಾಲೂಕು ಎಸ್.ಟಿ. ಮೋರ್ಚಾದ ಅಧ್ಯಕ್ಷ ಪ್ರಭಾಕರ್, ತಾಲೂಕು ಎಸ್.ಸಿ. ಮೋರ್ಚಾದ ಅಧ್ಯಕ್ಷ ಕುಮಾರಸ್ವಾಮಿ, ರಾಜ್ಯ ಎಸ್.ಸಿ. ಮೋರ್ಚಾ ಸಮಿತಿಯ ಸದಸ್ಯ ವರದರಾಜ್ ದಾಸ್, ಕೂಡುಮಂಗಳೂರು ಮಹಿಳಾ ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ರಾಜು, ಚಿಕ್ಕತ್ತೂರು ಗ್ರಾಮದ ಪ್ರಮುಖರಾದ ಕೃಷ್ಣ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.