ವೀರಾಜಪೇಟೆ, ಏ. 11: ಕಲ್ಲುಬಾಣೆ ಯೂತ್ ಅಸೋಸಿಯೇಷನ್ ವತಿಯಿಂದ 5ನೇ ವರ್ಷದ ಪ್ರಯುಕ್ತ ಕೆ.ಪಿ.ಎಲ್. ಸೌಹಾರ್ದ ಕ್ರೀಡಾಕೂಟ ಆಯೋಜಿಸಿದ್ದು, ತಾ. 12 (ಇಂದು) ಆರ್ಜಿ ಗ್ರಾಮದ ಕಲ್ಲುಬಾಣೆಯ ‘ಕೆಂಗೋಟ್’ ಕ್ರೀಡಾಂಗಣದಲ್ಲಿ ಕಲ್ಲುಬಾಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಮತ್ತು ಪುಟ್ಬಾಲ್ ಟೂರ್ನಮೆಂಟ್ ನಡೆಯಲಿದೆ.

ತಾ. 12ರಂದು ಬೆಳಿಗ್ಗೆ 7 ಗಂಟೆಗೆ ಕ್ರೀಡಾಕೂಟದ ಪ್ರಚಾರಾರ್ಥ ಕ್ರೀಡಾಪಟುಗಳಿಂದ ಮ್ಯಾರಥಾನ್ ನಡೆಯಲಿದ್ದು ಅಪರಾಹ್ನ 3 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ತಾ. 14ರಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಗುತ್ತದೆ.

ಕಲ್ಲುಬಾಣೆ ಯೂತ್ ಅಸೋಷಿಯೇಶೆನ್‍ನ ಕಾರ್ಯ ಚಟುವಟಿಕೆಗಳಲ್ಲಿ ಕೆ.ಪಿ.ಎಲ್. ಸೌಹಾರ್ದ ಕ್ರೀಡಾಕೂಟ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಈ ಕ್ರೀಡಾ ಕೂಟದ ಮೂಲಕ ಗ್ರಾಮೀಣ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವದು ಹಾಗೂ ಹೆಸರೇ ಸೂಚಿಸುವಂತೆ ಗ್ರಾಮದ ಜನತೆಯಲ್ಲಿ ಪರಸ್ಫರ ಐಕ್ಯತೆ ಭಾತೃತ್ವ, ಸೌಹಾರ್ದತೆ, ಹಾಗೂ ಕೋಮು ಸಾಮರಸ್ಯವನ್ನು ಕಾಪಾಡುವದು ಇದರ ಪ್ರಮುಖ ಉದ್ದೇಶವಾಗಿದೆ, ಉಳಿಕೆ ಹಣದಿಂದ ಗ್ರಾಮದ ಶಾಲಾ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.