ಸೋಮವಾರಪೇಟೆ, ಏ. 11: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಹಲವಷ್ಟು ಸಿಬ್ಬಂದಿಗಳನ್ನು ದಿಡೀರ್ ಕೆಲಸದಿಂದ ತೆಗೆದಿರುವ ಕ್ರಮವನ್ನು ಖಂಡಿಸಿ, ನೌಕರರು ಇಂದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರಲ್ಲದೇ, ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಕೆ ನೀಡಿದರು.

ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 13 ಸಿಬ್ಬಂದಿಗಳನ್ನು ಟೆಂಡರ್‍ದಾರರು ಏಕಾಏಕಿ ವಜಾಗೊಳಿಸಿದ್ದು, ನಮಗಳ ಬದುಕು ಬೀದಿಗೆ ಬರಲಿದೆ. ಬದಲಿ ಕೆಲಸವೂ ಇಲ್ಲದೇ ನಾವುಗಳು ಹೇಗೆ ಜೀವನ ಸಾಗಿಸಬೇಕು? ಎಂದು ನೌಕರರು ಪ್ರಶ್ನಿಸಿ, ಧಿಕ್ಕಾರದ ಘೋಷಣೆ ಕೂಗಿದರು.ಆರೋಗ್ಯ ಇಲಾಖೆ ನೀಡಿರುವ ಸಿಬ್ಬಂದಿಗಳ ವಜಾ ಆದೇಶವನ್ನು ತಕ್ಷಣ ವಾಪಾಸ್ ಪಡೆದು ಸಿಬ್ಬಂದಿಗಳನ್ನು ಮರು ನೇಮಕಗೊಳಿಸಬೇಕು. ತಪ್ಪಿದಲ್ಲಿ ತಾ.15ರಿಂದ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸ ಲಾಗುವದು. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆ ಯನ್ನು ಬಹಿಷ್ಕರಿಸಲಾಗುವದು ಎಂದು ಎಚ್ಚರಿಸಿದರು.ಯುನೈಟೆಡ್ ಪ್ಲಾಂಟೇಷನ್ ವರ್ಕಸ್ ಯೂನಿಯನ್ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ಮಹೇಶ್ ಅವರುಗಳ ನೇತೃತ್ವದಲ್ಲಿ ಆಸ್ಪತ್ರೆಯ ಎದುರು ಧರಣಿ ನಡೆಸಿದ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಹಾಗು ಟೆಂಡರ್‍ದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈಗ ಯಾವದೇ ನೋಟೀಸ್ ನೀಡದೆ ಕೆಲಸದಿಂದ ವಜಾ ಮಾಡಿದ್ದಾರೆ. (ಮೊದಲ ಪುಟದಿಂದ) ತಕ್ಷಣ ಕೆಲಸ ಕೊಡದಿದ್ದರೆ ಆಸ್ಪತ್ರೆ ಎದುರು ಉಪವಾಸ ಕೂರುತ್ತೇವೆ ಎಂದು ಸುಶೀಲ, ಕಮಲ, ಪಾರ್ವತಿ, ಪದ್ಮ, ಸರೋಜ, ಚರಣ್, ಮಿಥುನ್, ಗಜೆಂದ್ರ, ಮಾದೇಶ, ನಿರ್ಮಲ ರೋಷನ್, ಸುಧಾ, ರಾಣಿ ಸೇರಿದಂತೆ ಇತರರು ಹೇಳಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಶೌಚಾಲಯ ಸ್ವಚ್ಚಗೊಳಿಸುವದು, ನೆಲ ಒರೆಸುವವರನ್ನು ಏಕಾಏಕಿ ವಜಾ ಮಾಡಿದರೆ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಅವರಿಗೆ ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ಆರೋಗ್ಯ ಇಲಾಖೆಯ ಅಮಾನವೀಯ ಕೃತ್ಯ ಖಂಡನೀಯ. ಕೂಡಲೆ ವಜಾ ಮಾಡಿದವರನ್ನು ಮರುನೇಮಕ ಮಾಡಬೇಕು. ತಪ್ಪಿದಲ್ಲಿ ಕಾರ್ಮಿಕ ಸಂಘಟನೆಗಳ ಮೂಲಕ ಉಗ್ರ ಹೋರಾಟ ಸಂಘಟಿಸಲಾಗುವದು, ಮತದಾನ ಬಹಿಷ್ಕರಿಸಲಾಗುವದು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಸೋಮಪ್ಪ ಎಚ್ಚರಿಸಿದರು.

ಸ್ಥಳಕ್ಕೆ ಇಲಾಖೆಯ ಮೇಲಧಿಕಾರಿ ಗಳು ಹಾಗೂ ತಹಶೀಲ್ದಾರ್ ಆಗಮಿಸಬೇಕೆಂದು ಪಟ್ಟುಹಿಡಿದು ಧರಣಿ ಮುಂದುವರೆಸಿ ದರು. ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ಗೋವಿಂದರಾಜು ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರಲ್ಲದೇ, ಆರೋಗ್ಯ ಇಲಾಖೆಯ ಮೇಲಾಧಿಕಾರಿ ಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗಹರಿಸುವಂತೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿ ಶಿವಪ್ರಸಾದ್ ಅವರಿಗೆ ಸೂಚಿಸಿದರು. ನಂತರ ಪ್ರತಿಭಟನೆ ಯನ್ನು ಸ್ಥಗಿತಗೊಳಿ¸ Àಲಾಯಿತು. ಈ ಸಂದರ್ಭ ಪ್ರಮುಖರಾದ ಐಗೂರು ದಿನೇಶ್, ಗಣೇಶ್, ಕೃಷ್ಣ ಮತ್ತಿತರರು ಇದ್ದರು. ಠಾಣಾಧಿಕಾರಿ ಶಿವಶಂಕರ್ ಉಪಸ್ಥಿತರಿದ್ದರು.