ಸಿದ್ದಾಪುರ, ಏ. 11: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ, ದಿಡ್ಡಳ್ಳಿ, ಬಸವನಹಳ್ಳಿ, ಕೆಸುವಿನಹಳ್ಳ, ಗುಡ್ಲೂರು, ಚಿಕ್ಕರೇಷ್ಮೆ ಹಾಡಿ ವ್ಯಾಪ್ತಿಯಲ್ಲಿ ಮನೆ ಮನೆ ಕಾಂಗ್ರೆಸ್ ಚುನಾವಣಾ ಮತಯಾಚನೆ ಕಾರ್ಯಕ್ರಮ ನಡೆಸಿತು.

ಚೆನ್ನಯ್ಯನಕೋಟೆ ಭಾಗದ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ವಿ. ಸುರೇಶ್ ಸೋಮಯ್ಯ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜನಪರ ಯೊಜನೆಗಳನ್ನು ಜಾರಿಗೆ ತಂದಿದ್ದು ಬಡ ಮತ್ತು ಮಧ್ಯಮ ಕುಟಂಬಗಳಿಗೆ ಅನುಕೂಲವಾಗಿದೆ. ಈ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್‍ರನ್ನು ಆಯ್ಕೆಗೊಳಿಸಬೇಕೆಂದು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಸದಸ್ಯೆ ಕಾವೇರಮ್ಮ, ಪ್ರಮುಖರಾದ ವಿನ್ಸೆಂಟ್, ಕಡೇಮಾಡ ಅಯ್ಯಪ್ಪ, ಸುಬ್ಬಯ್ಯ ಹಾಗೂ ರಾಯಪ್ಪ ಇನ್ನಿತರರು ಹಾಜರಿದ್ದರು.