ಮಡಿಕೇರಿ, ಏ. 10: ಮಂಗಳಾದೇವಿ ನಗರದ ಸುತ್ತಮುತ್ತ ಮತ್ತು ಅಶೋಕಪುರದ ಭಾಗದಲ್ಲಿ ನಗರಸಭೆ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್, ಶ್ರೀ ಓಂಕಾರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ಪ್ಯಾಟ್ರಿಕ್ ಲೋಬೋ ಹಾಗೂ ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ವೆಂಕಟೇಶ್, ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭು ರೈ, ಅಲ್ಪಸಂಖ್ಯಾತರ ನಗರ ಉಪಾಧ್ಯಕ್ಷ ಇಸ್ಮಾಯಿಲ್ ಹಾಗೂ ಇತರರು ಚುನಾವಣಾ ಪ್ರಚಾರ ಮಾಡಿದರು.