ಮಡಿಕೇರಿ, ಏ. 9: ಕೊಡಗಿನ ಇತಿಹಾಸ ಪ್ರಸಿದ್ಧ ಮಕ್ಕೋಟು ಶ್ರೀ ಮಹಾಲಕ್ಷ್ಮಿ ದೇವಿಯ ಕೊಂಬಾಟ್ ಹಬ್ಬವು ತಾ. 15ರಂದು ನಡೆಯಲಿದೆ. ತಾ. 14ರಂದು ಪಟ್ಟಣಿ ಹಾಗೂ ಸಾಯಂಕಾಲ 4 ಗಂಟೆಗೆ ಅಯ್ಯಪ್ಪ ಕೋಲ ನಡೆಯಲಿದೆ. ತಾ. 15ರ ಬೆಳಿಗ್ಗೆ 10 ಗಂಟೆಗೆ ಎತ್ತು ಪೋರಾಟ ಬಳಿಕ ದೇವಿಯ ಕೊಂಬಾಟ್ ನೃತ್ಯ ನಡೆಯಲಿದೆ. ಮಧ್ಯಾಹ್ನ ಅನ್ನದಾನವಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.