ಗೋಣಿಕೊಪ್ಪ ವರದಿ, ಏ. 9: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ರೋಟರಿ ಕ್ಲಬ್ ಹಾಗೂ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಸಹಯೋಗದಲ್ಲಿ ಅಲ್ಲಿನ ಶಾರದಾಶ್ರಮ ಆಸ್ಪತ್ರೆಯಲ್ಲಿ ತಾ. 14 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ತಪಾಸಣೆ ನಡೆಯಲಿದೆ. ಕಣ್ಣು, ಮೂಗು, ಗಂಟಲು ತಜ್ಞ ಡಾ. ಮೋಹನ್ ಅಪ್ಪಾಜಿ, ಕಣ್ಣಿನ ತಜ್ಞ ಡಾ. ಸುಧಾಕರ್ ಶೆಟ್ಟಿ, ದಂತ ತಜ್ಞ ಡಾ. ಬೋಪಣ್ಣ, ಜನರಲ್ ಮೆಡಿಸಿನ್ ತಜ್ಞ ಡಾ. ಲೋಕೇಶ್, ಜನರಲ್ ಸರ್ಜರಿ ಬಗ್ಗೆ ಡಾ. ಪೊನ್ನಪ್ಪ ಇವರುಗಳ ತಂಡ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ 08274298369, 9611640552 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.