ಕುಶಾಲನಗರ, ಏ. 9: ಪಟ್ಟಣದ ಸ್ವಚ್ಛತೆಗೆ ಶ್ರಮವಹಿಸುವ ಪೌರ ಕಾರ್ಮಿಕರ ಕುಟುಂಬ ಸದಸ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಂಚಾಯಿತಿ ಹೆಚ್ಚಿನ ಗಮನಹರಿಸ ಬೇಕಾಗಿದೆ ಎಂದು ಬಿಎಸ್‍ಆರ್ ಗ್ರೂಪ್ಸ್‍ನ ಮುಖ್ಯಸ್ಥ ಡಿ. ಎಸ್. ಜಗದೀಶ್ ಹೇಳಿದರು. ಯುಗಾದಿ ಹಬ್ಬದ ಅಂಗವಾಗಿ ಬಿಎಸ್‍ಆರ್ ಸಂಸ್ಥೆಯ ವತಿಯಿಂದ ಕಚೇರಿಯಲ್ಲಿ ಕುಶಾಲನಗರ ಪಟ್ಟಣ ಪಂಚಾ ಯ್ತಿಯ 38 ಪೌರ ಕಾರ್ಮಿಕರಿಗೆ ವಸ್ತ್ರ, ಆಹಾರ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು. ಪಟ್ಟಣದ ಸ್ವಚ್ಚತೆ ಬಗ್ಗೆ ದಿನನಿತ್ಯ ಕಾರ್ಯೋನ್ಮುಖರಾಗುವ ಪೌರ ಕಾರ್ಮಿಕರ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾಗಿದೆ ಎಂದರು. ಈ ಸಂದರ್ಭ ಸಂಸ್ಥೆಯ ಆರ್. ಬಾಬು, ಸಿಬ್ಬಂದಿಗಳಾದ ಶಶಿಕಿರಣ್, ದರ್ಶನ್, ಡಿ.ಆರ್. ಸೋಮ ಶೇಖರ್ ಇದ್ದರು.