ವೀರಾಜಪೇಟೆ, ಏ. 10: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಬಿ.ಎಡ್.ಶಿಕ್ಷಣದ ಅಧ್ಯಯನಕ್ಕೆ ತಾ. 11ರಂದು 10 ಗಂಟೆಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಉಪ ನಿರ್ದೇಶಕ ಪಿ.ಎಸ್. ಮಚಾಡೋ ಚಾಲನೆ ನೀಡಲಿದ್ದಾರೆ.

ವೀರಾಜಪೇಟೆ ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿರುವ ಬಿಎಡ್ ದೂರ ಶಿಕ್ಷಣ ಸಂಸ್ಥೆಯ ಅಧ್ಯಯನ ತಾ. 11 ರಿಂದ (ಇಂದಿನಿಂದ) ಮೇ 31ರ ತನಕ ನಡೆಯಲಿದ್ದು, ಸುಮಾರು 100 ಪ್ರಶಿಕ್ಷಣಾರ್ಥಿಗಳು ಭಾಗವಹಿಸಲಿರು ವದಾಗಿ ಆಡಳಿತ ಮಂಡಳಿ ತಿಳಿಸಿದೆ.