ಶನಿವಾರಸಂತೆ, ಏ. 10: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡ ಕೊಡ್ಲಿ ಗ್ರಾಮದಲ್ಲಿ 4 ವರ್ಷಗಳ ಹಿಂದೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ 2 ವರ್ಷ ಸಜೆ, ತಲಾ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ದೊಡ್ಡಕೊಡ್ಲಿ ಗ್ರಾಮದ ಆರೋಪಿಗಳಾದ ಅಭಿಷೇಕ್, ಹರೀಶ್ ಹಾಗೂ ರಾಮಯ್ಯ ಈ ಮೂವರು ಈ ಹಿಂದೆ 10.12.15 ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇದೀಗ 4 ವರ್ಷಗಳ ನಂತರ ಸೋಮವಾರಪೇಟೆಯ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಸ್. ಭರತ್ ಅವರು ಮೂವರು ಆರೋಪಿಗಳಿಗೆ 2 ವರ್ಷ ಸಜೆ ಮತ್ತು ತಲಾ ರೂ. 10 ಸಾವಿರ ದಂಡ ವಿಧಿಸಿದ್ದಾರೆ.