ಮಡಿಕೇರಿ, ಏ. 10: ಇಲ್ಲಿಗೆ ಸಮೀಪದ ಕಗ್ಗೋಡ್ಲುವಿನ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. 10 ರಿಂದ ಆರಂಭಗೊಂಡಿದೆ. ಮುಂದಿನ ತಾ. 18ರ ತನಕ ಜರುಗಲಿದೆ. ಈ ಪ್ರಯುಕ್ತ ನಿತ್ಯ ದೈವಿಕ ಪೂಜಾ ಕೈಂಕರ್ಯಗಳೊಂದಿಗೆ ತಾ. 14 ರಿಂದ 17ರ ತನಕ ಸದ್ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.