ಶನಿವಾರಸಂತೆ, ಏ. 10: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಶನಿವಾರ ಸಂತೆ ಹೋಬಳಿ ಮುಖಂಡರುಗಳು ಜಂಟಿಯಾಗಿ ಹಮ್ಮಿಕೊಂಡಿರುವ ಮೋದಿ ಯುವಜನ ವಿರೋಧಿ ವಾಹನ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್‍ಸಿಂಹ, ಮೋದಿ ಅವರ ಮುಖ ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದು, ಇವರು ಐದು ವರ್ಷದಲ್ಲಿ ಕೊಡಗಿಗೆ ಮಾಡಿರುವ ಕೆಲಸ ಸೊನ್ನೆ ಎಂದರು. ಸಭೆಯಲ್ಲಿ ಪ್ರಮುಖರಾದ ಡಿ.ಪಿ. ಬೋಜಪ್ಪ, ಬಿ.ಟಿ. ರಂಗಸ್ವಾಮಿ, ಹಿಮಕರ ಗೌಡ ಮಾತನಾಡಿದರು. ಪಕ್ಷದ ಮುಖಂಡರಾದ ಹನೀಫ್, ರಾಘವೇಂದ್ರ, ನಾಸಿರ್, ಅಬ್ಬಾಸ್ ಹಾಜಿ, ಮಹಮ್ಮದ್ ಪಾಷ, ವಿ.ಟಿ. ನಾಗರಾಜ್, ಹರೀಶ್, ಎನ್.ಕೆ. ಅಪ್ಪಸ್ವಾಮಿ, ಚಂದ್ರ, ಪೂರ್ಣೇಶ್ ಉಪಸ್ಥಿತರಿದ್ದರು.