ಮಡಿಕೇರಿ, ಏ. 9 : 2019ರ ಲೋಕಸಭಾ ಚುನಾವಣೆ ತಾ. 18 ರಂದು ನಡೆಯಲಿದ್ದು, ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 22 ಮಂದಿ ಸ್ಪರ್ಧೆಯಲ್ಲಿದ್ದಾರೆ. 11,261 ಮಂದಿ ನೂತನ ಮತದಾರರು, ಮಹಿಳೆಯರು ಸೇರಿದಂತೆ ಈ ಬಾರಿ 4,41,041 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಮತದಾನಕ್ಕೆ ಇನ್ನೂ ಕೇವಲ 9 ದಿನಗಳು ಮಾತ್ರ ಉಳಿದಿದೆ. ಮಹಾ ಸಮರವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿ ಮಡಿಕೇರಿ, ಏ. 9 : 2019ರ ಲೋಕಸಭಾ ಚುನಾವಣೆ ತಾ. 18 ರಂದು ನಡೆಯಲಿದ್ದು, ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 22 ಮಂದಿ ಸ್ಪರ್ಧೆಯಲ್ಲಿದ್ದಾರೆ. 11,261 ಮಂದಿ ನೂತನ ಮತದಾರರು, ಮಹಿಳೆಯರು ಸೇರಿದಂತೆ ಈ ಬಾರಿ 4,41,041 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಮತದಾನಕ್ಕೆ ಇನ್ನೂ ಕೇವಲ 9 ದಿನಗಳು ಮಾತ್ರ ಉಳಿದಿದೆ. ಮಹಾ ಸಮರವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿ ಮತದಾರರು ಮತ್ತು 49 ಮಹಿಳಾ ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 61 ನಗರ ಪ್ರದೇಶ ಹಾಗೂ 482 ಗ್ರಾಮಾಂತರ ಪ್ರದೇಶದ ಮತಗಟ್ಟೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೊಡಗು-ಮೈಸೂರು ಕ್ಷೇತ್ರದಲ್ಲಿ 22 ಮಂದಿ ಕಣದಲ್ಲಿದ್ದಾರೆ. ಈ ಬಾರಿ ಪ್ರತಿ ಮತಗಟ್ಟೆಯಲ್ಲಿ 2 ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ ಎಂದರು.
ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯ ನಡೆದಿದೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,251 ಬ್ಯಾಲೆಟ್ ಯುನಿಟ್, 721 ಕಂಟ್ರೋಲ್ ಯುನಿಟ್ ಮತ್ತು 667 ವಿವಿಪ್ಯಾಟ್ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಫ್ ಲೈನ್ ಆಪ್, ಚುನಾವಣಾ ಆ್ಯಪ್ ಮತ್ತು ಸಿ-ವಿಜಿಲ್ ಆ್ಯಫ್ಗಳನ್ನು
ಮತದಾರರು ಮತ್ತು 49 ಮಹಿಳಾ ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 61 ನಗರ ಪ್ರದೇಶ ಹಾಗೂ 482 ಗ್ರಾಮಾಂತರ ಪ್ರದೇಶದ ಮತಗಟ್ಟೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೊಡಗು-ಮೈಸೂರು ಕ್ಷೇತ್ರದಲ್ಲಿ 22 ಮಂದಿ ಕಣದಲ್ಲಿದ್ದಾರೆ. ಈ ಬಾರಿ ಪ್ರತಿ ಮತಗಟ್ಟೆಯಲ್ಲಿ 2 ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ ಎಂದರು.
ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯ ನಡೆದಿದೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,251 ಬ್ಯಾಲೆಟ್ ಯುನಿಟ್, 721 ಕಂಟ್ರೋಲ್ ಯುನಿಟ್ ಮತ್ತು 667 ವಿವಿಪ್ಯಾಟ್ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಫ್ ಲೈನ್ ಆಪ್, ಚುನಾವಣಾ ಆ್ಯಪ್ ಮತ್ತು ಸಿ-ವಿಜಿಲ್ ಆ್ಯಫ್ಗಳನ್ನು ತಿದ್ದುಪಡಿ ಮಾಡಲಾದ ಒಟ್ಟು 11,261 ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಬೂತ್ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಒಟ್ಟು 4,41,041 ಮತದಾರರಿಗೆ ವೋಟರ್
(ಮೊದಲ ಪುಟದಿಂದ) ಸ್ಲಿಪ್ನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1,42,716 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಗೈಡ್ನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲು ಸಹ ಸಿದ್ಧ್ದತೆ ಮಾಡಿಕೊಳ್ಳಲಾಗಿದ್ದು, ಮತದಾರರ ಗೈಡ್ನಲ್ಲಿ ಮತದಾನ ಕೇಂದ್ರದಲ್ಲಿ ಇರುವ ಸೌಲಭ್ಯಗಳ ವಿವರ, ಮತದಾರರು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಬಗ್ಗೆ ಕಂಡುಕೊಳ್ಳಲು ವಿವರಗಳು, ವಿವಿಪ್ಯಾಟ್ ಉಪಯೋಗಿಸುವ ರೀತಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಕೆಯ ಬಗ್ಗೆ ವಿವರ, ಸಹಾಯವಾಣಿಯ ವಿವರ ಮತ್ತು ಎಪಿಕ್ ಸಂಖ್ಯೆಯನ್ನು ಉಪಯೋಗಿಸಿ ಮತದಾರರ ವಿಧಾನಸಭಾ ಕ್ಷೇತ್ರ, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಅತೀ ಸುಲಭವಾಗಿ ಎಸ್ಎಂಎಸ್ ಮೂಲಕ ಕಂಡುಕೊಳ್ಳಲು ದೂರವಾಣಿ ವಿವರ ಮತ್ತು ಮತದಾರರ ಗುರುತಿನ ಚೀಟಿ ಹೊಂದಿಲ್ಲದೇ ಇದ್ದರೆ ಮತದಾನಕ್ಕೆ ಹಾಜರುಪಡಿಸಬೇಕಾದ ದಾಖಲೆಗಳ ವಿವರ ಹಾಗೂ ಚುನಾವಣೆ ಮತ್ತು ಚುನಾವಣಾ ಆಯೋಗದ ಮಹತ್ತರ ವಿಷಯಗಳ ಕೈಪಿಡಿಯನ್ನು ಮತದಾರರ ಮನೆ ಬಾಗಿಲಿಗೆ ತಲಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸೂಕ್ಷ್ಮ ಮತಗಟ್ಟೆಗಳು
ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳಿದ್ದು, ಇವುಗಳಲ್ಲಿ 123 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 91 ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 53 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷ ಇರುವ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಸುರಕ್ಷಿತವಾಗಿ ಮತಗಟ್ಟೆ ತಲಪಲು ಮತ್ತು ಮತದಾನ ಪೂರ್ಣಗೊಂಡ ನಂತರ ಸುರಕ್ಷಿತವಾಗಿ ಡಿ-ಮಸ್ಟರಿಂಗ್ ಕೇಂದ್ರಕ್ಕೆ ತಲಪುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆ ಕಚೇರಿಯಲ್ಲಿ 24x7 ನಿಯಂತ್ರಣ ಕೊಠಡಿ ತೆರೆಯಲಾಗಿದೆ. (ದೂ.ಸಂ: 08272-298161) ಎಂದು ತಿಳಿಸಿದರು. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು ನೀತಿ ಸಂಹಿತೆ ಪಾಲನಾ ತಂಡ ಹಾಗೂ ಚುನಾವಣಾ ವೆಚ್ಚ ನಿರ್ವಹಣೆ ತಂಡ ರಚಿಸಲಾಗಿದ್ದು, 41 ಸೆಕ್ಟರ್ ಆಫಿಸರ್, 14 ಎಫ್ಎಸ್ಟಿ, 42 ಎಸ್ಎಸ್ಟಿ, 4 ವಿಎಸ್ಟಿ, 2 ವಿವಿಟಿ, 2 ಲೆಕ್ಕ ನಿರ್ವಹಣಾ ತಂಡ, 2 ಸಹಾಯಕ ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗದು - ಮದ್ಯ ವಶ
ಚುನಾವಣೆ ಅಧಿಸೂಚನೆ ಪ್ರಕಟವಾದ ನಂತರ ಇಲ್ಲಿಯವರೆಗೆ 1,97,000 ನಗದು ಹಣ ಮುಟ್ಟುಗೋಲು ಮಾಡಲಾಗಿದೆ. ರೂ. 78,20,829 ಮೌಲ್ಯದ 11,562 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಹಾಗೆಯೇ 10 ಸಾವಿರ ಮೌಲ್ಯದ ಗಾಂಜಾ, 10 ವಾಹನ ವಶಪಡಿಸಿಕೊಳ್ಳಲಾಗಿದೆ. ಎಸ್ಎಸ್ಟಿಯಿಂದ 3, ಎಫ್ಎಸ್ಟಿಯಿಂದ 7 ಮತ್ತು ಪೊಲೀಸ್ ಇಲಾಖೆಯಿಂದ 17 ಪ್ರಕರಣಗಳು ದಾಖಲಾಗಿದೆ. ಹಾಗೆಯೇ 355 ಪ್ರಕರಣಗಳಿಗೆ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 2,392 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಮತ್ತು ಎರಡನೇ ಹಂತದ ತರಬೇತಿ ನೀಡಲಾಗಿದೆ. ಮಹಿಳಾ ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರ ಸಮಕ್ಷಮ ಮ್ಯಾನುವಲ್ ರ್ಯಾಂಡಮೈಸೇಷನ್ ಮೂಲಕ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಯಾವದೇ ತಂಡದಲ್ಲಿ ಒಬ್ಬರು ಮಹಿಳಾ ಅಧಿಕಾರಿ, ಸಿಬ್ಬಂದಿಗಳು ಇರುವದಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಕೇಂದ್ರ ವ್ಯಾಪ್ತಿಯ ಸಂಸ್ಥೆ, ಕಚೇರಿ, ನಿಗಮ, ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಬೇಕಾಗಿದ್ದು, ಒಟ್ಟು 330 ಮೈಕ್ರೋ ವೀಕ್ಷಕರುಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಮೈಕ್ರೋ ವೀಕ್ಷಕರುಗಳಿಗೆ ಏಪ್ರಿಲ್, 11 ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕಾನೂನು ವ್ಯವಸ್ಥೆ
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ 183 ಪ್ರಕರಣಗಳಿಗೆ ಜಾಮೀನು ರಹಿತ ವಾರೆಂಟ್ ದಾಖಲಿಸಲಾಗಿದೆ. ಹಾಗೆಯೇ ಇದುವರೆಗೆ 430 ಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸುಮಾರು 790 ಮಂದಿಯಿಂದ ಸನ್ನಡತೆ ಆದಾರದಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ 4,356 ಮಂದಿ ಕೋವಿ ಪರವಾನಗಿ ಪಡೆದಿದ್ದು, ಇದರಲ್ಲಿ ಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳ 22 ಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.
ವಿಶೇಷ ಚೇತನರಿಗೆ ವ್ಯವಸ್ಥೆ
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಮಾಡಲು ವಿಶೇಷ ಚೇತನ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಗೆ ತೆರಳಲು ವೀಲ್ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 3090 ವಿಶೇಷ ಚೇತನ ಮತದಾರರಿದ್ದು, ರ್ಯಾಂಪ್ ವ್ಯವಸ್ಥೆ, ವೀಲ್ ಚೇರು, ಭೂತಕನ್ನಡಿ, ಬ್ರೈಲ್ ಲಿಪಿಯಲ್ಲಿ ಮತದಾರರ ಚೀಟಿ ಮತ್ತು ಮತದಾರರ ಮತಪತ್ರವನ್ನು ಮುದ್ರಿಸಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಡೆಗೆ 543 ಸ್ವಯಂ ಸೇವಕರನ್ನು ಹಾಗೂ 146 ಕರೆದುಕೊಂಡು ಹೋಗಿ ಬರಲು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಅದೇ ರೀತಿ ವಿಶೇಷ ಚೇತನರು ಹಾಗೂ ಹಿರಿಯ ಅಶಕ್ತ ನಾಗರಿಕರನ್ನು ಮನೆಯಿಂದ ಮತಗಟ್ಟೆಗೆ ಕರೆದುಕೊಂಡು ಬರಲು ಮತ್ತು ಮತದಾನ ಮಾಡಿದ ನಂತರ ಮನೆಗೆ ಬಿಡಲು ಅನುಕೂಲವಾಗುವಂತೆ ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 70 ಕ್ಕೂ ಹೆಚ್ಚು ಆಟೋ ರಿಕ್ಷಾ ಹಾಗೂ 76 ಕ್ಕೂ ಹೆಚ್ಚು ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚುನಾವಣಾ ಮೊಬೈಲ್ ಆ್ಯಪ್ ಮೂಲಕ ವೀಲ್ ಚೇರು ಮತ್ತು ಭೂತ ಕನ್ನಡಿ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ರೀತಿಯ ಮಾಹಿತಿ, ಸಲಹೆ, ಆಕ್ಷೇಪಣೆ ಹಾಗೂ ದೂರು ನೀಡಲು ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಬಹುದಾಗಿದೆ.
ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮ ಕೈಗೊಳ್ಳಲಾಗಿದೆ. ಸೆಕ್ಟರ್ ಅಧಿಕಾರಿಗಳ ಮೂಲಕ ಪ್ರತೀ ಮತಗಟ್ಟೆಯ ಪ್ರದೇಶಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಎರಡು ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಸಖಿ ಮತಗಟ್ಟೆ
ಎರಡು ವಿಧಾನಸಭಾ ಕ್ಷೇತ್ರಗಳಿಂದ 10 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮತಗಟ್ಟೆ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು, ಪೊಲೀಸರು ಹಾಗೂ ಮತಗಟ್ಟೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಹಿಳಾ ಸಿಬ್ಬಂದಿಗಳು ಇದ್ದಾರೆ. ಜಿಲ್ಲೆಯಲ್ಲಿ ಒಂದು ವಿಶೇಷ ಚೇತನ ಮತಗಟ್ಟೆ ಸ್ಥಾಪಿಸಲಾಗಿದೆ. 5 ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.
ವಿದ್ಯುನ್ಮಾನ ಮತಯಂತ್ರಗಳ ಚಲನವಲನ ಬಗ್ಗೆ ನಿಗಾವಹಿಸಲು ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಈ ಬಗ್ಗೆ ಎಲ್ಲಾ 41 ಸೆಕ್ಟರ್ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸಲಾಗಿದ್ದು, ಇದರಿಂದ ಮತದಾನದ ದಿನದಂದು ಕಾಯ್ದಿರಿಸಿದ ವಿದ್ಯುನ್ಮಾನ ಮತಯಂತ್ರಗಳ ಚಲನವಲನದ ಕುರಿತು ಪರಿಶೀಲಿಸಲಾಗುವದು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದರು.
ಮಸ್ಟರಿಂಗ್ ಕಾರ್ಯ
ಮಸ್ಟರಿಂಗ್ ಕಾರ್ಯವು ತಾ. 17 ರಂದು ನಡೆಯಲಿದ್ದು, ಡಿ-ಮಸ್ಟರಿಂಗ್ ಕಾರ್ಯವು ತಾ. 18 ರಂದು ನಡೆಯಲಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂತ ಜೋಸೆಫರ ಶಾಲೆ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಭೆ, ರ್ಯಾಲಿ, ವಾಹನಗಳು ತಾತ್ಕಾಲಿಕ ಚುನಾವಣಾ ಕಚೇರಿ, ಲೌಡ್ ಸ್ಪೀಕರ್ಗಳಿಗೆ ಬೇಕಾದ ಅನುಮತಿಯನ್ನು ಸುವಿಧಾದಿಂದ ಪಡೆಯಬಹುದಾಗಿದೆ ಎಂದರು.
ಚುನಾವಣಾ ಆಯೋಗವು ಸಿ-ವಿಜಿಲ್, ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಈ ಅಪ್ಲಿಕೇಶನ್ನ್ನು ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ, ಗೃಹ ಬಳಕೆ ಸಾಮಗ್ರಿಗಳು, ಮದ್ಯ ಹಂಚಿಕೆ ಮಾಡುವ ಬಗ್ಗೆ ಹಾಗೂ ಯಾವದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘನಾ ಪ್ರಕರಣಗಳ ಬಗ್ಗೆ ಅಪ್ಲಿಕೇಶನ್ನಲ್ಲಿ ವೀಡಿಯೋ ಮತ್ತು ಪೋಟೋಗಳನ್ನು ಅಪ್ ಲೋಡ್ ಮಾಡುವದರ ಮೂಲಕ ದೂರು ಸಲ್ಲಿಸಬಹುದಾಗಿದೆ.
ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆ ಮತ್ತಿತರ ಸಂಬಂಧ ದೂರು ನೀಡಲು ಅಬಕಾರಿ ಉಪ ಆಯುಕ್ತರ ಕಚೇರಿ, ಮಡಿಕೇರಿಯಲ್ಲಿ ನಿಯಂತ್ರಣ ಕೊಠಡಿ 08272-229295 ತೆರೆಯಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಸರ್ಕಾರಿ ವಾಹನಗಳು ಹಾಗೂ ಖಾಸಗಿ ವಾಹನಗಳು ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ವಾಹನಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ.
ಮತದಾರರ ಪಟ್ಟಿ ಹಾಗೂ ಮತದಾನದ ಬಗ್ಗೆ ಹೆಚ್ಚಿನ ಮಾಹಿತಿಗೆ ತಿತಿತಿ.eಛಿi.gov.iಟಿ, ತಿತಿತಿ.ಟಿvsಠಿ.iಟಿ, ತಿತಿತಿ. ಛಿeoಞಚಿಡಿಟಿಚಿಣಚಿಞಚಿ. ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಞoಜಚಿgu.ಟಿiಛಿ.iಟಿ/eಟಿ/eಟeಛಿಣioಟಿ ವೆಬ್ಸೈಟ್ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿ ಶ್ರೇಯಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಅಬಕಾರಿ ಇಲಾಖೆಯ ಅಧಿಕಾರಿ ವೀರಣ್ಣ, ಲೀಡ್ ಬ್ಯಾಂಕ್ ಅಧಿಕಾರಿ ಗುಪ್ತಾಜಿ ಇತರರು ಇದ್ದರು.