ಮಡಿಕೇರಿ, ಏ. 10: ಮರ್ಕರ ಮುಸ್ಲಿಂ ಯೂತ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಮುಸ್ಲಿಂ ಜನಾಂಗದ ಬಡ ಕುಟುಂಬದ ಬಾಲಕರ ಉಚಿತ ಸುನ್ನತ್ (ಮುಂಜಿ) ಕಾರ್ಯವನ್ನು ತಾ. 14 ರಂದು ಪೂರ್ವಾಹ್ನ 11 ಗಂಟೆಗೆ ಮಡಿಕೇರಿಯಲ್ಲಿ ನಡೆಸಲಾಗುವದು.

ಅಂದು ನಗರದ ಜಾಮಿಯಾ ಮಸೀದಿಯ ಮದ್ರಸಾ ಹಾಲ್‍ನಲ್ಲಿ ನಡೆಯಲಿರುವ ಸುನ್ನತ್ ಕಾರ್ಯಕ್ರಮದಲ್ಲಿ ಸುಮಾರು ಅರವತ್ತು ಬಾಲಕರು ಪಾಲ್ಗೊಳ್ಳಲು ಅವಕಾಶವಿದ್ದು, ಅರ್ಹರು ಕೂಡಲೇ ತಮ್ಮ ಮಕ್ಕಳ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಘಟನೆಯ ಅಧ್ಯಕ್ಷ ದಾನಿಶ್ ಖಾನ್ ಕೋರಿಕೊಂಡಿದ್ದಾರೆ. ಮಕ್ಕಳ ಹೆಸರುಗಳನ್ನು ಸಂಘದ ಪದಾಧಿಕಾರಿ ನಿಸಾರ್ ಅಹ್ಮದ್ ಅವರ (9980668426) ಸಂಖ್ಯೆಗೆ ಫೋನಾಯಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.