ಶನಿವಾರಸಂತೆ, ಏ. 10: ಸಿದ್ಧಗಂಗಾ ಶ್ರೀಗಳು ಬುದ್ಧನ ಕರುಣೆ, ಏಸುವಿನ ಪ್ರೀತಿ, ಬಸವಣ್ಣನ ಸಾಮಾಜಿಕ ನ್ಯಾಯವನ್ನು ಪರಿಪಾಲಿಸುತ್ತಾ ಬಡ ಮಕ್ಕಳ ಆಶಾಕಿರಣವಾಗಿ ಲಕ್ಷಾಂತರ ಮಕ್ಕಳಿಗೆ ಬೆಳಕನ್ನು ಕೊಟ್ಟರು ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಹೆಬ್ಬುಲ್ಸೆ ಗ್ರಾಮದಲ್ಲಿ ನಡೆದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ 112ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಸಂದೀಪ್, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಪಟೇಲ್ ತಮ್ಮಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ, ನಿವೃತ್ತ ಸೈನಿಕ ಪರಮೇಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪುರೋಹಿತರಾದ ಸಂಗಮೇಶ್ ಹಾಗೂ ಸೋಮಶೇಖರ್ ಶಾಸ್ತ್ರಿ ಪೂಜಾ ವಿಧಿ ನೆರವೇರಿಸಿದರು. ಪ್ರಸಾದ ವಿತರಣೆ ಮಾಡಲಾಯಿತು.