ಮಡಿಕೇರಿ, ಏ. 9: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಟ್ಟೆ ಕೈಚೀಲ (ಬ್ಯಾಗ್) ವನ್ನು ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ ಅವರು ಬಿಡುಗಡೆ ಮಾಡಿದರು. ಈ ಪರಿಸರ ಸ್ನೇಹಿ ಕೈಚೀಲ (ಬ್ಯಾಗ್) ವನ್ನು ಗ್ರಾ.ಪಂ.ಮೂಲಕ ಮತದಾರರ ಅರಿವು ಕಾರ್ಯಕ್ರಮ ಸಂದರ್ಭದಲ್ಲಿ ವಿತರಿಸಲಾಗುತ್ತದೆ.