ನಾಪೆÇೀಕ್ಲು, ಏ. 9: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವಕ್ಕೆ ತಾ. 12ರಂದು ಚಾಲನೆ ದೊರೆಯಲಿದ್ದು ಎರಡು ದಿನಗಳ ಕಾಲ ಉತ್ಸವ ನಡೆಯಲಿದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ವಿಶೇಷವಾಗಿ ತಯಾರಿಸಲಾದ ಎರಡು ಕೊಡೆಗಳನ್ನು ಪನ್ನಂಗಾಲತಮ್ಮೆ ದೇವಾಲಯಕ್ಕೆ ತರಲಾಗುತ್ತದೆ. ಇದನ್ನು ವೀಕ್ಷಿಸಲು ಊರಿನ, ಪರ ಊರಿನ ಭಕ್ತರು ಸೇರಿರುತ್ತಾರೆ. ದೈವ ದರ್ಶನ ಹಾಗೂ ಎತ್ತೇರಾಟ ಜರುಗುತ್ತದೆ.