ನಾಪೆÉÇೀಕ್ಲು, ಏ. 9: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿಕೂಟದ ಅಭ್ಯರ್ಥಿ ಸಿ. ಹೆಚ್. ವಿಜಯ ಶಂಕರ್ ತಾ. 6 ರಂದು ನಾಪೋಕ್ಲುವಿನಲ್ಲಿ ನಗರದ ಆಟೋ ಚಾಲಕರ ಮತ್ತು ಅಂಗಡಿ ಮಾಲೀಕರ ಬಳಿಗೆ ತೆರಳಿ ಮತಯಾಚಿದರು. ಈ ಸಂದರ್ಭ ಎಂಎಲ್ಸಿ ವೀಣಾ ಅಚ್ಚಯ್ಯ, ನಾಪೆÉÇೀಕ್ಲು ಹೋಬಳಿ ಅಧ್ಯಕ್ಷ ಕುಶು ಕುಶಾಲಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬ ತಿಮ್ಮಯ್ಯ ಪ್ರಮುಖ ಅರೆಯಡ ಸೋಮಪ್ಪ, ಜೆ.ಡಿ.ಎಸ್. ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್, ಜೆ.ಡಿ.ಎಸ್. ಪ್ರಮುಖ ಬೊಪ್ಪೇರ ಕಾವೇರಪ್ಪ, ಹೊದ್ದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ಮಾಜಿ ಜಿ.ಪಂ. ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ರಾಜ್ಯ, ಜಿಲ್ಲಾ ನಾಯಕರುಗಳು ಇದ್ದರು.