ಮಡಿಕೇರಿ, ಏ. 9: ಟಾಟಾ ಸಂಸ್ಥೆಗೆ ಸೇರಿದ ಕೋವರ್‍ಕೊಲ್ಲಿ ತೋಟದ ಇತಿಹಾಸ ಪ್ರಸಿದ್ಧ ಶ್ರೀವನದುರ್ಗಿ ದೇವರ ವಾರ್ಷಿಕೋತ್ಸವ ತಾ. 12ರಂದು ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಗಣಹೋಮ, 9 ಗಂಟೆಗೆ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಕ್ರೀಡಾಕೂಟ, 12 ಗಂಟೆಗೆ ಮಹಾಪೂಜೆ, 1 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಗ್ರಾಮ ಮುಖ್ಯ ರಸ್ತೆಗಳಲ್ಲಿ ದೇವಿಯ ವಿಗ್ರಹಗಳ ಮೆರವಣಿಗೆ ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.