ಮಡಿಕೇರಿ, ಏ. 9: ಹತ್ತು ರೂ. ಮುಖ ಬೆಲೆಯ ನಾಣ್ಯ ಚಲಾವಣೆಗೆ ಸಂಬಂಧಿಸಿದಂತೆ ಕಳೆದ ಹಲವಷ್ಟು ಸಮಯಗಳಿಂದ ಗೊಂದಲಗಳು ಮುಂದುವರಿಯುತ್ತಲೇ ಇವೆ. ಗ್ರಾಹಕರು ಈ ನಾಣ್ಯವನ್ನು ಚಲಾವಣೆಗೆ ನೀಡಿದರೆ, ವ್ಯಾಪಾರಿಗಳು ಇದು ಪ್ರಸ್ತುತ ಚಲಾವಣೆಯಲಿಲ್ಲ ಎಂಬ ಕಾರಣ ಹೇಳಿ ನಿರಾಕರಿಸುತ್ತಿದ್ದಾರೆ. ಈ ಪ್ರಸಂಗಗಳು ಹಿಂದಿನಿಂದಲೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಈ ನಾಣ್ಯದ ಚಲಾವಣೆಯನ್ನು ಹಿಂಪಡೆದಿಲ್ಲ ಎಂಬ ಸ್ಪಷ್ಟನೆಗಳೂ ಹಲವು ಬಾರಿ ಬಂದಿವೆ. ಆದರೂ ಖಚಿತವಾದ ಸ್ಪಷ್ಟತೆ ಇಲ್ಲದೆ ವ್ಯಾಪಾರಿಗಳು, ಗ್ರಾಹಕರ ಗೊಂದಲ ಬಗೆಹರಿದಿಲ್ಲ. ಈ ಕುರಿತು ಸಂಬಂಧಿಸಿದವರು ಜನತೆಗೆ ಖಚಿತ ಮಾಹಿತಿ ಒದಗಿಸಬೇಕಿದೆ.