ಕುಶಾಲನಗರ, ಏ. 9: ದುಬಾರೆ ಸಾಕಾನೆ ಶಿಬಿರದಲ್ಲಿ ಶಿಬಿರದಿಂದ ಕಾಡಿಗೆ ತಪ್ಪಿಸಿಕೊಂಡ ಗೋಪಿ ಆನೆ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಶಿಬಿರದಿಂದ ಸರಪಳಿ ತುಂಡರಿಸಿ ಪರಾರಿಯಾದ ಸಾಕಾನೆಯ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಆನೆಯ ಮದ ಇಳಿಯಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗಿದ್ದು ನಂತರ ತಾನಾಗಿಯೇ ಶಿಬಿರಕ್ಕೆ ಮರಳುವ ಸಾಧ್ಯತೆಯಿದೆ ಎಂದು ಅರಣ್ಯ ಉಪ ವಲಯ ಅಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ. ಆನೆಯ ಮಾವುತ ಅಪ್ಪಯ್ಯ ಮತ್ತು ಸಿಬ್ಬಂದಿ ಗೋಪಿಯ ಬಗ್ಗೆ ನಿಗಾವಹಿಸುತ್ತಿದ್ದಾರೆ. ಉಳಿದ ಆನೆಗಳಿಗೆ ಯಾವದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಶಿಬಿರದ ವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.