ಮಡಿಕೇರಿ, ಏ. 10: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ಕ.ವಿ.ಪ್ರ.ನಿ.ನಿ. ಅವರ ಕೋರಿಕೆಯಂತೆ ತಾ. 11 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವೀರಾಜಪೇಟೆ, ಸಿದ್ದಾಪುರ ಹಾಗೂ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸ ಲಾಗುವದು. ವೀರಾಜಪೇಟೆ, ಬಿ.ಶೆಟ್ಟಿಗೇರಿ, ಬೇತ್ರಿ, ಕಡಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಐಮಂಗಲ, ಕಾರ್ಮಾಡು, ಬಿಳುಗುಂದ, ಕಾವಾಡಿ, ಕಣ್ಣಂಗಾಲ, ಬೈರಂಬಾಡ, ಹಾಲುಗುಂದ, ಮಾಲ್ದಾರೆ, ಮೂರ್ನಾಡು, ಮರಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ನಾಪೋಕ್ಲು ಕುಂಜಿಲ, ಕಕ್ಕಬೆ, ಯವಕಪಾಡಿ, ಪಾಲೂರು, ಹಳೇ ತಾಲೂಕು ಎಮ್ಮೆಮಾಡು ಹಾಗೂ ಸುತ್ತ ಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ ಎಂದು ಸೆಸ್ಕ್ ಇಇ ಸೋಮಶೇಖರ್ ತಿಳಿಸಿದ್ದಾರೆ.