ಮಡಿಕೇರಿ, ಏ. 9: ಎಲ್ಲಾ ಖಾಸಗಿ ಶಾಲೆಗಳಲ್ಲಿ 2017-18ನೇ ಸಾಲಿಗೆ (ಅಲ್ಪಸಂಖ್ಯಾತ ಶಾಲೆ ಹೊರತುಪಡಿಸಿ ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮದನ್ವಯ ಶೇ.25 ರಷ್ಟು ಸೀಟುಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ 6 ಶಾಲೆಗಳಲ್ಲಿ 46 ಸೀಟುಗಳು ಲಭ್ಯ ಇವೆ. ಅರ್ಜಿ ಸಲ್ಲಿಸಲು ಏಪ್ರಿಲ್, 15 ಕೊನೆಯ ದಿನವಾಗಿದೆ.

2019-20ನೇ ಶೈಕ್ಷಣಿಕ ಸಾಲಿಗೆ ಪ್ರಾರಂಭಿಕ ತರಗತಿಗಳಾದ ಎಲ್‍ಕೆಜಿ ಮತ್ತು 1ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು. ಆರ್‍ಟಿಐ ತಿದ್ದುಪಡಿ ನಿಯಮದ ಪ್ರಕಾರ ತಮ್ಮ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ನೆರೆಹೊರೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವದಿಲ್ಲ. ಆದರೆ ಅನುದಾನಿತ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇತರೆ ವರ್ಗದವರಿಗೆ ರೂ. 3.5 ಲಕ್ಷ ಆದಾಯ ಮಿತಿ ನಿಗದಿಪಡಿಸಿ ಪ್ರವರ್ಗ-ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ ಆದಾಯ ಮಿತಿ ಇರುವದಿಲ್ಲ. ಅರ್ಜಿ ಸಲ್ಲಿಸಲು ವಯೋಮಿತಿ: ಜನ್ಮ ದಿನಾಂಕದಿಂದ ದಿನಾಂಕ 1-06-2019 ರಲ್ಲಿ ಇದ್ದಂತೆ ಎಲ್‍ಕೆಜಿ ತರಗತಿಗೆ (01-08-2014 ರಿಂದ 01-08-2015 ರೊಳಗೆ ಜನಿಸಿದ ಮಕ್ಕಳು) 1 ನೇ ತರಗತಿಗೆ (01-08-2012 ರಿಂದ 01-08-2013 ರೊಳಗೆ ಜನಿಸಿದ ಮಕ್ಕಳು ಸಾರ್ವಜನಿಕ ಇಲಾಖೆಯ hಣಣಠಿ:sಛಿhooಟeಜuಛಿಚಿಣioಟಿ. ಞಚಿಡಿ.ಟಿiಛಿ.iಟಿ ವೆಬ್‍ಪೋರ್ಟಲ್‍ನಲ್ಲಿ ಆರ್‍ಟಿಇ-2019 ಲಿಂಕ್ ಕ್ಲಿಕ್ ಮಾಡಿ ನೆರೆಹೊರೆಯಲ್ಲಿ ಶಾಲೆಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವದು.

ಜಿಲ್ಲೆಯ 3 ಶೈಕ್ಷಣಿಕ ವಲಯಗಳ ಶಾಲಾವಾರು, ವರ್ಗವಾರು ಆರ್.ಟಿ.ಇ ಸೀಟು, ಲಭ್ಯತೆ ವಿವರ ಬಿ.ಇ,ಒ ಕಚೇರಿ ಸಹಾಯವಾಣಿ: ಮಡಿಕೇರಿ ವಲಯದ ನೇತಾಜಿ ಪ್ರಾಥಮಿಕ ಶಾಲೆ ಬಲ್ಲಮಾವಟಿ ಎಸ್‍ಸಿ 02, ಇತರೆ 03 ಒಟ್ಟು 05 ಸಹಾಯವಾಣಿ 08272-225664, ಸೋಮವಾರಪೇಟೆ ವಲಯದ ಜ್ಞಾನಭಾರತಿ ಹಿ.ಪ್ರಾ. ಶಾಲೆ ಕುಶಾಲನಗರ, ಎಸ್.ಜಿ.ಎಂ ಸೋಮವಾರಪೇಟೆ ಎಸ್‍ಸಿ 05, ಎಸ್‍ಟಿ 01, ಇತರೆ 10 ಒಟ್ಟು 16 ಸಹಾಯವಾಣಿ 08276-282162, ವಿರಾಜಪೇಟೆ ತಾಲ್ಲೂಕಿನ ವಿಜಯ ಹಿ.ಪ್ರ.ಶಾಲೆ ಕಡಂಗ, ಕಾವೇರಿ ಹಿ.ಪ್ರಾ ಶಾಲೆ ಕುಕ್ಲೂರು, ತ್ರಿವೇಣಿ. ಹಿ.ಪ್ರಾ ಶಾಲೆ ಕುಕ್ಲೂರು ಎಸ್‍ಸಿ 09, ಎಸ್‍ಟಿ 01, ಇತರೆ 15 ಒಟ್ಟು 25 ಸೀಟುಗಳು. ಸಹಾಯವಾಣಿ 08274-257249. ಮೂರು ತಾಲ್ಲೂಕಿನಲ್ಲಿ ಒಟ್ಟು ಎಸ್‍ಸಿ 16 , ಎಸ್‍ಟಿ 2, ಇತರೆ 28, ಒಟ್ಟು 46 ಸೀಟುಗಳು ಲಭ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೊ ಅವರು ತಿಳಿಸಿದ್ದಾರೆ.