ಕೂಡಿಗೆ, ಏ.9 : ಹಾರಂಗಿ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಳಿ ನಿಯಮಿತ ಕುಶಾಲನಗರದ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ 3ನೇ ಬಾರಿಗೆ ಅರಕಲಗೂಡು ತಾಲೂಕಿನ ಮಸರಗೂರು ನೀರು ಬಳಕೆದಾರರ ಸಂಘದ ಪ್ರತಿನಿಧಿ ಎಸ್.ಸಿ. ಚೌಡೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಹಾರಂಗಿ ಯೋಜನಾಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರಗೂರು ನೀರು ಬಳಕೆದಾರರ ಸಂಘದ ಪ್ರತಿನಿಧಿ ಚೌಡೇಗೌಡ ಮತ್ತು ಕುಪ್ಪೆ ನೀರು ಬಳಕೆದಾರರ ಸಂಘದ ಪ್ರತಿನಿಧಿ ಕೆ.ವಿ. ನವೀನ್ ಕುಮಾರ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಚೌಡೇಗೌಡ, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.