ಮಡಿಕೇರಿ, ಏ. 9: ಮಡಿಕೇರಿ ಸನಿಹದ ಹಾಕತ್ತೂರು ಬಳಿ ಇಂದು ಅಪರಾಹ್ನ ಲಾರಿ ಹಾಗೂ ಕಾರೊಂದರ ನಡುವೆ ಅಪಘಾತ ಸಂಭವಿಸಿತ್ತು. ಲಾರಿ ರಸ್ತೆಗುರುಳಿ ಬಿದ್ದಿದ್ದರೆ, ಕಾರಿನ ಮುಂಭಾಗ ಜಖಂಗೊಂಡಿತ್ತು. ಆದರೆ ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡೂ ವಾಹನಗಳು ನೆರೆ ಜಿಲ್ಲೆಗಳಿಗೆ ಸೇರಿದ್ದೆನ್ನಲಾಗಿದ್ದು, ರಾಜಿ ತೀರ್ಮಾನದ ಮೂಲಕ ಇತ್ಯರ್ಥಗೊಂಡಿದೆ.